ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ

  • In State
  • August 5, 2020
  • 205 Views
ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ

ದೇವದುರ್ಗ : ಸಿಸಿ ರಸ್ತೆ ಎಂದರೆ, ಜನವಸತಿ ಪ್ರದೇಶ, ನೀರು ನಿಲ್ಲುವ ಮುಖ್ಯರಸ್ತೆಯಲ್ಲಿ ನಿರ್ಮಿಸಿವುದು ನಿಯಮ. ಆದರೆ, ಇಲ್ಲಿನ ನಗರಗುಂಡ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ನಗರಗುಂಡ ಗ್ರಾಮದಲ್ಲಿ ಸುಮಾರು 1 ಕೋಟಿ ರೂ. ಅಧಿಕ ಅನುದಾನದ ಸಿಸಿ ರಸ್ತೆ ಮಂಜುರಾಗಿದ್ದು, ಅಗತ್ಯ ಇರುವ ಕಡೆ ಬಿಟ್ಟು, ಅನಗತ್ಯ ಹಾಗೂ ಜನ ಓಡಾಡದ ಕಡೆ ಕಾಮಗಾರಿ ಕೈಗೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಗರಗುಂಡದ ಬಸವನಗರದ ಎರಡು ಕಡೆ, ರೈತರ ಜಮೀನೊಂದರಲ್ಲಿ ಸುಮಾರು 200 ಮೀಟರ್‌ಗೂ ಹೆಚ್ಚು ಸಿಸಿ ರಸ್ತೆ ನಿರ್ಮಿಸಿದ್ದಾರೆ. ಆದರೆ, ಮುಖ್ಯರಸ್ತೆಯಲ್ಲಿ ಮಳೆ ನೀರು ನಿಂತರೂ ಸಿಸಿ ರಸ್ತೆ ನಿರ್ಮಿಸಿಲ್ಲ.

ಮೊದಲೇ ಹಾಳಾದ ರಸ್ತೆಯಲ್ಲಿ ಟಿಪ್ಪರ್‌ಗಳ ಓಡಾಟ ಮತ್ತಷ್ಟು ರಸ್ತೆ ಹದಗೆಡಿಸಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಖ್ಯರಸ್ತೆ ಅಭಿವೃದ್ಧಿಪಡಿಸಬೇಕು. ಅನಗತ್ಯವಾಗಿ ರೈತರ ಜಮೀನನಲ್ಲಿ ಸಿಸಿ ರಸ್ತೆ ಕೈಗೊಂಡವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ನಗರಗುಂಡದ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಓಡಾಡುವುದು ದುಸ್ಥರವಾಗಿದೆ. ಇಂಥ ರಸ್ತೆ ಅಭಿವೃದ್ಧಿ ಮಾಡುವ ಬದಲು ಅನಗತ್ಯಕಡೆ ಸಿಸಿ ರಸ್ತೆ ನಿರ್ಮಿಸಿದ್ದಾರೆ. ಯಾರೂ ಓಡಾದ ರೈತರ ಜಮೀನಿನಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದಾರೆ. ಅಧಿಕಾರಿಗಳು ಗಮನಹರಿಸಿ ಮುಖ್ಯರಸ್ತೆ ಅಭಿವೃದ್ಧಿ ಮಾಡಬೇಕೆಂದು ಆರೋಪಿಸಿದರು..

ಫ್ರೆಶ್ ನ್ಯೂಸ್

Latest Posts

Featured Videos