ಪಪ್ಪಾಯಿ ಸೇವನೆಯಿಂದ ಉತ್ತಮ ಆರೋಗ್ಯ

ಪಪ್ಪಾಯಿ ಸೇವನೆಯಿಂದ ಉತ್ತಮ ಆರೋಗ್ಯ

ಬೆಂಗಳೂರು, ಡಿ. 07: ಸಾಮಾನ್ಯವಾಗಿ ಮನೆಯಲ್ಲಿರುವ ತರಕಾರಿ, ಹಣ್ಣುಗಳಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದೇ ರೀತಿ ಪರಂಗಿ ಹಣ್ಣಿನಿಂದ ಹಲವಾರು ರೀತಿಯ ಪ್ರಯೋಜನಗಳಿವೆ.

ನಿಯಮಿತವಾಗಿ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡಿ ಕುಡಿಯುತ್ತಿದ್ದರೆ, ದೇಹದ ತೂಕವನ್ನು ನೈಸರ್ಗಿಕವಾಗಿ ಕಳೆದುಕೊಳ್ಳಬಹುದು.

1 ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ಕ್ಷಿಪ್ರಗತಿಯಲ್ಲಿ ತೂಕ ಕಡಿಮೆಯಾಗುತ್ತದೆ.

2 ಹಸಿ ಪಪ್ಪಾಯಿಯ ಸೇವನೆ ಬೊಜ್ಜಿನ ಸಮಸ್ಯೆಗೂ ರಾಮಬಾಣವಾಗಿದೆ.

3  ಪಪ್ಪಾಯಿಯನ್ನು ಸಲಾಡ್ ರೂಪದಲ್ಲಿ ಸೇವಿಸಿದರೆ ತುಂಬಾ ಒಳ್ಳೆಯದು. ಇದರಿಂದ ದೇಹದೊಳಗಿರುವ ವಿಷಕಾರಿ ಅಂಶ ಹೊರಗೆ ಹೋಗುತ್ತದೆ.

4 ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ಅಭ್ಯಾಸ ಮಾಡಿಕೊಂಡರೆ ಹೊಟ್ಟೆಯಲ್ಲಿರುವ ಹುಳು, ಕ್ರಿಮಿಕೀಟಗಳು ಸತ್ತು ಹೋಗುತ್ತವೆ.

5 ಪಪ್ಪಾಯದ ನಿಯಮಿತ ಸೇವನೆಯಿಂದ ಡಯಾಬಿಟಿಸ್ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.

6 ಪಪ್ಪಾಯ ಬೀಜವನ್ನು ಒಣಗಿಸಿ ಆ ಪುಡಿಯನ್ನು ಜೇನುತುಪ್ಪದಲ್ಲಿ ಸೇವಿಸಿದರೆ ಮಹಿಳೆಯರ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos