ಕಂಠಪೂರ್ತಿ ಕುಡಿಸಿ ಅತ್ಯಾಚಾರ

ಕಂಠಪೂರ್ತಿ ಕುಡಿಸಿ ಅತ್ಯಾಚಾರ

ಹೈದರಾಬಾದ್ , ಡಿ. 23 : ಮದ್ಯ ಕುಡಿಸಿ 60 ವರ್ಷದ ವೃದ್ಧ ಭಿಕ್ಷುಕಿಯ ಮೇಲೆ ಕಾಮುಕರಿಬ್ಬರು ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದ ಸಿಕಂದರಾಬಾದಿನಲ್ಲಿ ನಡೆದಿದೆ.
ಮಲ್ಕಾಜ್ ಗಿರಿ ನಿವಾಸಿ ಆಂಥೋನಿ (50) ಹಾಗೂ ನೆನವತ್ ವಿಜಯ್ ಕುಮಾರ್ (53) ಈ ಕೃತ್ಯ ಎಸಗಿದ ಆರೋಪಿಗಳಾಗಿದ್ದು, ಇವರು ಮಿರ್ಜಾಲ್ಗುಡ ಕ್ರಾಸ್ ಬಳಿ ಭಿಕ್ಷೆ ಬೇಡುತ್ತಿದ್ದ 60 ವರ್ಷದ ವೃದ್ಧೆಗೆ ಮದ್ಯದ ಆಸೆ ತೋರಿಸಿ ಮನೆಗೆ ಕರೆದೊಯ್ದು, ಆಕೆಗೆ ಕಂಠಪೂರ್ತಿ ಕುಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದು, ವೃದ್ಧೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos