ಪೌಷ್ಟಿಕ ಆಹಾರ ಪಡೆದು ಸದೃಢರಾಗಿ

ಪೌಷ್ಟಿಕ ಆಹಾರ ಪಡೆದು ಸದೃಢರಾಗಿ

ಕಮಲನಗರರ: ತಾಲ್ಲೂಕಿನ ಹೋಳಸಮುದ್ರ ಗ್ರಾಮದ ಮಹಾದೇವ ಬಡಾವಣೆಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಾಷ್ಟ್ರೀಯ ಫೋಷಣ್ ಅಭಿಯಾನ, ಮಾತೃ ವಂದನಾ ಸಪ್ತಾಹ, ಮಾತೃ ಪೂರ್ಣ ಯೋಜನೆ ಹಾಗೂ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿತು.

ಗ್ರಾಮದ ಮುಖಂಡ ಪ್ರದೀಪ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಬಾಣಂತಿಯರು, ಗರ್ಭಿಣಿಯರು ಆರೋಗ್ಯವಂತರಾಗಲು ರಾಜ್ಯ ಸರ್ಕಾರ ಹಲವು ಯೋಜನೆ ಜಾರಿ ಮಾಡಿದೆ. ಅಂಗನವಾಡಿ ಶಿಕ್ಷಕಿಯರು ಗರ್ಭಿಣಿಯರಿಗೆ ಮೊಟ್ಟೆ, ಕಾಳು ಬೆಲ್ಲ ಸೇರಿದಂತೆ ಇನ್ನಿತರ ಆಹಾರ ದಾನ್ಯವನ್ನು ವಿತರಿಸುತ್ತಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಗರ್ಭಿಣಿ ಮಹಿಳೆಯರು ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯ ಪೌಷ್ಟಿಕ ಆಹಾರ ಸೇವನೆಯಿಂದ ಹುಟ್ಟಿದ ಮಗು ಹಾಗೂ ತಾಯಿಯ ಆರೋಗ್ಯ ಸದೃಢ ವಾಗಿರುತ್ತದೆ ಎಂದು ಹೋಳಸಮುದ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನಿಲ ರಾಯಪಳ್ಳಿ ಮಹಿಳೆಯರಿಗೆ ಕಿವಿ ಮಾತು ಹೇಳಿದರು.

ಈ ವೇಳೆ ಗ್ರಾ.ಪಂ ಸದಸ್ಯ ಸತೀಶ್ ಭುರೆ, ಅಂಗನವಾಡಿ ಶಿಕ್ಷಕಿ ಶಿವಗಂಗಾ, ಸಿಸ್ಟರ ರಾಧಿಕಾ, ಕವಿತಾ, ಅಂಗನವಾಡಿ ಸಹಾಯಕಿ ಪದ್ಮಾವತಿ, ಬಡಾವಣೆಯ ಗರ್ಭಿಣಿ ಮಹಿಳೆಯರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos