ಗಂಗಾವತಿ: ಸಂತ ಸೇವಾಲಾಲ್ ಜಯಂತಿ ಅದ್ದೂರಿ ಆಚರಣೆ

ಗಂಗಾವತಿ: ಸಂತ ಸೇವಾಲಾಲ್ ಜಯಂತಿ ಅದ್ದೂರಿ ಆಚರಣೆ

ಕೊಪ್ಪಳ, ಫೆ. 25:  ಗಂಗಾವತಿ ನಗರದಲ್ಲಿ ಸಂತ ಸೇವಾಲಾಲ್ ಜಯಂತಿ ಅದ್ದೂರಿಯಾಗಿ ಆಚರಿಸಿದರು. ಸೇವಾಲಾಲ್ ಭಾವಚಿತ್ರದೊಂದಿಗೆ ತಾಲೂಕಿನ ಎಪಿಎಂಸಿ ಇಂದ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ, ಸಸಿ ಚಿಗುರು ಹಾಗೂ ಕುಂಭ ಹೊತ್ತ ಮಹಿಳೆಯರು ಗಮನ ಸೆಳೆದರು.

ಮುಖಂಡರಾದ ಲಕ್ಷ್ಮಣ್ಣ ಮಾತನಾಡಿ, ಬುದ್ಧ, ಬಸವರಂತೆ ಸಂತ ಸೇವಾಲಾಲ್ ಸಹ ಸಮಾಜ ಸುಧಾರಣೆಗಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡಿದ್ದಾರೆ ಈ ಸಂತರ ಬಗ್ಗೆ ಅನೇಕ ಐತಿಹ್ಯಗಳಿವೆ. 1739ರಲ್ಲಿ ನ್ಯಾಮತಿ ತಾಲ್ಲೂಕಿನ, ಹಿಂದೆ ಹೊನ್ನಾಳಿ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿಯ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲ ರಗೊಂಡನಕೊಪ್ಪದಲ್ಲಿ ಅನೇಕ ಪವಾಡಗಳನ್ನು ನಡೆಸಿದ್ದಾರೆ.

ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಚಾಲ್ತಿಯಲ್ಲಿವೆ. ಮಹಾರಾಷ್ಟ್ರದ ಪೌರಾಗಢದಲ್ಲಿ ಪೌರಾದೇವಿಯ ಸ್ಥಳ ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ ಎಂದು ನೆನಪಿಸಿದರು.

ಇದೆ ಸಂದರ್ಭ ಕೊಪ್ಪಳ ಜಿಲ್ಲಾಧ್ಯಕ್ಷ ಲಕ್ಷ್ಮಣ್ಣ, ಹಾಗೂ ರಾಮ್ ನಾಯಕ್ ವೆಂಕಟೇಶ್ವರ ನಾಯಕ್, ಮುಂತಾದ ಸಮುದಾಯದ ಮುಖಂಡರು ಹಾಗೂ ಗಣ್ಯರ ನೇತೃತ್ವದಲ್ಲಿ ಸಂತ ಸೇವಾಲಾಲ್ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos