ಗಾಂಧೀಜಿ ಹಸ್ತಪ್ರತಿ ಹರಾಜು

ಗಾಂಧೀಜಿ ಹಸ್ತಪ್ರತಿ ಹರಾಜು

ವಾಷಿಂಗ್ಟನ್, ಡಿ.9 : ಎಂಟು ದಿನಗಳ ತರುವಾಯ ಗಾಂಧೀಜಿ ಹತ್ಯೆ ಸಂಭವಿಸಿದೆ. ದಾಖಲೆಯ ಹರಾಜಿನ ಮುಖಬೆಲೆ 110,000 ಡಾಲರ್ ಆಗಿದೆ. ಈ ಟಿಪ್ಪಣಿಯನ್ನು ಅವರ ಜ.22ರ ಭಾಷಣದ ಹಸ್ತಪ್ರತಿ ಎಂದು ವಿವರಿಸಲಾಗಿದೆ. ಆದಾಗ್ಯೂ ಇದು ಇಡೀ ಭಾಷಣವಲ್ಲ, ಆದರೆ ಅದರ ಒಂದು ತುಣುಕು ಮತ್ತು ಅದನ್ನು ಸ್ಕ್ರ್ಯಾಪ್ ಪೇಪರ್ನಲ್ಲಿ (ರದ್ದಿ ಕಾಗದ) ಬರೆಯಲಾಗಿದೆ.
ಇನ್ನು ಈ ಹಸ್ತಪ್ರತಿಯನ್ನು ರಾಬ್ ಕಲೆಕ್ಷನ್ ಎಲ್ಲಿಂದ ಸ್ವಾಧೀನಕ್ಕೆ ಪಡೆದಿತ್ತು ಎನ್ನುವುದನ್ನು ಇನ್ನೂ ಬಹಿರಂಗಪಡಿಸಿಲ್ಲ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಕೈ ಬರಹದ ಕೊನೆಯ ಹಸ್ತಪ್ರತಿಯನ್ನು ಹರಾಜಿಗೆ ಇಟ್ಟಿರುವುದಾಗಿ ಅಮೆರಿಕದ ರಾಬ್ ಕಲೆಕ್ಷನ್ ಪ್ರಕಟಿಸಿದೆ. ಇದು ಸಾರ್ವಜನಿಕವಾಗಿ ಲಭ್ಯವಿರುವ ಗಾಂಧೀಜಿಯ ಕೈ ಬರಹದ ಕೊನೆಯ ಹಸ್ತಪ್ರತಿ ಎಂದೂ ಹೇಳಲಾಗಿದೆ. ಇದರ ಮೌಲ್ಯ 1.10 ಲಕ್ಷ ಡಾಲರ್.
ಇದಕ್ಕಿಂತಲೂ ಹೆಚ್ಚಿನ ಮೌಲ್ಯಕ್ಕೆ ಇದು ಹರಾಜಾಗುವ ನಿರೀಕ್ಷೆ ಇದೆ. ಇದು 1948 ಜನವರಿ 22ರಂದು ಪ್ರಾರ್ಥನಾ ಸಭೆಯೊಂದರಲ್ಲಿ ಅವರು ಮಾಡಿದ ಭಾಷಣದ ಹಸ್ತಪ್ರತಿಯಾಗಿದೆ ಎನ್ನಲಾಗಿದೆ. ವಿಭಜನೆಯ ನಂತರ ಮತ್ತು ಗಡಿಯ ಎರಡೂ ಬದಿಯಲ್ಲಿ ನಡೆದ ಗಲಭೆಗಳ ನಂತರ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಹುಟ್ಟು ಹಾಕಲು ಗಾಂಧೀಜಿ ಕೈಗೊಂಡಿದ್ದ ಉಪವಾಸ ಕೊನೆಗೊಳಿಸಿದ ನಂತರ ಇದು ಅವರ ಮೊದಲ ಭಾಷಣದ ಹಸ್ತಪ್ರತಿ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos