ಗಂಭೀರ್ ದಾಖಲೆ ಮುರಿದ ಗಿಲ್

ಗಂಭೀರ್  ದಾಖಲೆ ಮುರಿದ ಗಿಲ್

ಟರೌಬ, ಆ.10: ಪ್ರತಿಭಾನ್ವಿತ ಬ್ಯಾಟ್ಸ್ಮನ್ ಶುಭ್ ಮನ್ ಗಿಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಭಾರತದ ಅತಿಕಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಮಾಜಿ ಎಡಗೈ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ.
ವೆಸ್ಟ್ಇಂಡೀಸ್ ‘ಎ’ ವಿರುದ್ಧ ಇಲ್ಲಿ ನಡೆದ 3ನೇ ಅನಧಿಕೃತ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ 19 ವರ್ಷದ ಗಿಲ್ 250 ಎಸೆತಗಳಲ್ಲಿ ಅಜೇಯ 204 ರನ್ ಸಿಡಿಸಿದರು. 2002ರಲ್ಲಿ 20 ವರ್ಷದ ಗೌತಮ್ ಗಂಭೀರ್, ಜಿಂಬಾಬ್ವೆ ವಿರುದ್ಧ ಬಿಸಿಸಿಐ ಅಧ್ಯಕ್ಷರ ಇಲೆವೆನ್ ಪರ 218 ರನ್ ಗಳಿಸಿದ್ದು ಈ ವರೆಗಿನ ದಾಖಲೆಯಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos