ಇಂದು “ಗಡಿಯಾರ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಇಂದು “ಗಡಿಯಾರ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಬೆಂಗಳೂರು, ಡಿ. 18: ಇತ್ತೀಚಿನ ದಿಗಳಲ್ಲಿ ಕನ್ನಡ ಚಿತ್ರರಂದಲ್ಲಿ ವಿಭಿನ್ನ ಕಥಾ ಹಂದರವನ್ನು ಹೊತ್ತು ಬರುತ್ತಿರುವ ಚಿತ್ರಗಳು ಹೆಚ್ಚಾಗಿದ್ದು, ಅಂತದ್ದೇ ಒಂದು ವಿಭಿನ್ನ ಕಥಾ ಹಂದರವನ್ನು ಹೊತ್ತು ಬಂದಿರುವ ಬಹುತಾರಾಂಗಣದ ಬಹುನಿರೀಕ್ಷಿತ “ಗಡಿಯಾರ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ ಹಾಗೂ  2020 ಶಿವರಾತ್ರಿ ಹಬ್ಬಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ.

25ಕ್ಕೂ ಅಧಿಕ ಅನುಭವಿ ಕಲಾವಿದರಿರುವ ಬಹುತಾರಾಂಗಣದ ವಿಶಿಷ್ಟ ಕಥಾ ಹಂದರವಿರುವ ಸಿನಿಮಾ. ಚಿತ್ರದಲ್ಲಿ ಎಸ್ ಪಿ ಸಾಂಗ್ಲಿಯಾನ ವಿಶೇಷ ಪಾತ್ರದಲ್ಲಿ ನಟಿಸುವುದರ ಜೊತೆಗೆ ಮಲಯಾಳಂನ ನಟ ” ರಿಹಾಜ್ ಎಮ್ ಟಿ ” ಹಾಗೂ ಹಿಂದಿಯ ” ಗೌರಿ ಶಂಕರ್ ” ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಚಿತ್ರದ ಮುಖ್ಯ ಪಾತ್ರದಲ್ಲಿ ಸ್ಟೈಲಿಷ್ ವಿಲನ್ ಎಂದು ಖ್ಯಾತರಾದ ರಾಜ್ ದೀಪಕ್ ಶೆಟ್ಟಿ ಮತ್ತು ಖ್ಯಾತ ನಿರೂಪಕಿ ಹಾಗೂ ನಟಿ ಶೀತಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹಾಗೂ ಮುಖ್ಯ ಪೋಷಕ ಪಾತ್ರದಲ್ಲಿ ಶರತ್ ಲೋಹಿತಾಶ್ವ ಮತ್ತು ಸುಚೇಂದ್ರ ಪ್ರಸಾದ ಬಣ್ಣ ಹೆಚ್ಚಿದ್ದಾರೆ. ಹಾಗೂ ಸಹ ಪಾತ್ರದಲ್ಲಿ ಮನದೀಪ್ ರಾಯ್, ರಾಧಾ ರಾಮಚಂದ್ರ, ಗಣೇಶ್ ರಾವ್, ಪ್ರದೀಪ್ ಪೂಜಾರಿ, ಪ್ರಣಯ್ ಮೂರ್ತಿ, ಡಿಸಿಪಿ ಚಬ್ಬಿ ನಟಿಸಿದ್ದಾರೆ. ಮತ್ತು ಇತರ ಪಾತ್ರಕ್ಕೆ ಸಂತೋಷ್, ವಿನಯ್ ರಾವ್, ಲೀಲಾಮೋಹನ್, ದೇವರಾಜ್, ಸ್ಪೂರ್ತಿ, ಶರ್ಮಿತ, ಸುರಕ್ಷಿತ, ಸಚಿನ್, ಸಂಕಲ್ಪ ಕಾಣಿಸಿಕೊಂಡಿದ್ದಾರೆ.

ಹಾಗೂ ವಿಶೇಷ ಹಾಡಿನಲ್ಲಿ ಬೆಂಗಾಲಿ ನಟಿ ” ಧಭಾಂಗನ ಚೌದರಿ ” ಮತ್ತು ಇನ್ನೊಂದು ಹಾಡಿನಲ್ಲಿ ಉದಯ ಮ್ಯೂಸಿಕ್ ನ ನಿರೂಪಕಿ ” ಪ್ರಯಾ ದರ್ಶಿನಿ ” ನಟಿಸಿದ್ದಾರೆ. ಚಿತ್ರದಲ್ಲಿ 4 ಅದ್ಭುತ ಸಾಹಸ ಸನ್ನಿವೇಶಗಳಿವೆ, ಖ್ಯಾತ ಸಾಹಸ ನಿರ್ದೇಶಕರಾದ ಥ್ರಿಲ್ಲರ್ ಮಂಜು ರವರು ಸಾಹಸ ಸನ್ನಿವೇಶಗಳನ್ನು ನಿರ್ದೇಶಿಸಿದ್ದಾರೆ ಹಾಗೂ ಹೈಟ್ ಮಂಜು ರವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಸಂಗೀತ ರಾಘವ್ ಸುಭಾಷ್, ಸಂಕಲನ ಎನ್ ಎಮ್ ವಿಶ್ವ, ಛಾಯಾಗ್ರಹಣ ಶ್ಯಾಮ್ ಹಾಗೂ ಹೇಮಂತ್ ಕುಮಾರ್, ಅನುರಾಧ ಭಟ್, ವ್ಯಾಸರಾಜ್, ಅಪೂರ್ವ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಕಥೆ – ಚಿತ್ರಕಥೆ – ಸಂಭಾಷಣೆ – ನಿರ್ದೇಶನ – ನಿರ್ಮಾಣ: ಪ್ರಬಿಕ್ ಮೊಗವೀರ್

ಕಥಾ ಸಾರಾಂಶ: ಇತಿಹಾಸ ಪ್ರಸಿದ್ದ ರಾಜಮನೆತನಗಳ ಹಿಡನ್ ಸೀಕ್ರೆಟ್ ರಿವಿಲ್ ಮಾಡುವುದರ ಜೊತೆಗೆ, ಕನಕಪುರದಲ್ಲಿ ನಡೆದ ನೈಜ ಘಟನೆಯ ಕಥಾಹಂದರ ಚಿತ್ರದಲ್ಲಿದೆ ಹಾಗೂ ವಿಶೇಷ ಚಿತ್ರಕಥೆ ಇರುವ ಗಡಿಯಾರದಲ್ಲಿ 3 ಮುಖ್ಯ ಕಥೆಯ ಜೊತೆಗೆ ಹತ್ತಕ್ಕೂ ಅಧಿಕ ಉಪಕಥೆಗಳಿವೆ. ಸಾಕಷ್ಟು ವಿಭಿನ್ನ ಅಂಶಗಳ ಜೊತೆಗೆ ನವರಸಗಳನ್ನು ಒಳಗೊಂಡ ಪರಿಪೂರ್ಣ ಕಮರ್ಷಿಯಲ್ ಸಿನಿಮಾ ” ಗಡಿಯಾರ “

ಫ್ರೆಶ್ ನ್ಯೂಸ್

Latest Posts

Featured Videos