ಕೋವಿಡ್ ಮುಕ್ತ ತುಮಕೂರಿಗಾಗಿ ಉಚಿತ ಔಷಧ

  • In State
  • August 19, 2020
  • 224 Views
ಕೋವಿಡ್ ಮುಕ್ತ ತುಮಕೂರಿಗಾಗಿ ಉಚಿತ ಔಷಧ

ತುಮಕೂರು: ನಗರವನ್ನು ಕೋವಿಡ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಫ್ರೆಂಟ್ ಲೈನ್ ಕೋವಿಡ್-೧೯ ವಾರಿರ‍್ಸ್ ತಂಡದಿಂದ ಆಯುಕ್ತ ಇಲಾಖೆಯ ಸಹಯೋಗದೊಂದಿಗೆ ಉಚಿತ ಹೋಮಿಯೋಪತಿ ಮಾತ್ರೆಗಳನ್ನು ಪೌರ ಕಾರ್ಮಿಕರು ಸೇರಿದಂತೆ ೧೫ನೇ ವಾರ್ಡ್ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ ಎಂದು ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ತಿಳಿಸಿದರು.
೧೫ನೇ ವಾರ್ಡ್ನ ಸಿಎಸ್‌ಐ ಪಾರ್ಕ್ ಬಳಿ, ಉಚಿತ ಹೋಮಿಯೋಪತಿ ಮಾತ್ರೆ ಹಾಗೂ ಮಾಸ್ಕ್ಗಳನ್ನು ಪೌರ ಕಾರ್ಮಿಕರಿಗೆ ವಿತರಿಸಿ ಮಾತನಾಡಿದ ಅವರು, ಕಳೆದ ಐದು ತಿಂಗಳಿಂದ ಕೊರೋನಾ ಹೆಚ್ಚಳವಾಗುತ್ತಿದ್ದು, ೧೫ನೇ ವಾರ್ಡ್ ನಾಗರೀಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಂತೆ ಮನವಿ ಮಾಡಿದ ಅವರು ಫ್ರೆಂಟ್ ಲೈನ್ ಕೋವಿಡ್-೧೯ ವಾರಿರ‍್ಸ್ ತಂಡದ ಸದಸ್ಯರು ಹಣ ಹಾಕಿ, ಉಚಿತವಾಗಿ ಸಾರ್ವಜನಿಕರಿಗೆ ಆಯುಷ್ ಇಲಾಖೆ ಮಾನ್ಯತೆ ಪಡೆದ ಮಾತ್ರೆಗಳನ್ನು ವಿತರಿಸುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ತುಮಕೂರು ನಗರವನ್ನು ಕೋವಿಡ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಫ್ರೆಂಟ್ ಲೈನ್ ಕೋವಿಡ್-೧೯ ವಾರಿರ‍್ಸ್ ತಂಡದ ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಚಾಲನೆ ನೀಡಿದ್ದು, ೧೫ನೇ ವಾರ್ಡ್ನ ನಾಗರೀಕರಿಗೆ ಹಾಗೂ ಪೌರಕಾರ್ಮಿಕರು ಹಾಗೂ ಕೊರೋನಾ ವಾರಿರ‍್ಸ್ಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲು ಮುಂದಾಗಿದೆ, ಇಂತಹ ಸಮಾಜೋಪಕಾರಿ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ನೀಡಬೇಕಿದೆ ಎಂದ ಅವರು, ರೋಗವನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪಾಲಿಕೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಫ್ರೆಂಟ್ ಲೈನ್ ಕೋವಿಡ್-೧೯ ವಾರಿರ‍್ಸ್ ತಂಡದ ಸದಸ್ಯ ಫಣೀಂದ್ರ ಸುರಭಿ ಅವರು, ಡಾ.ಚಂದ್ರಮಧುಸೂಧನ್ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದ್ದು, ನಗರವನ್ನು ಕೋವಿಡ್ ಮುಕ್ತಗೊಳಿಸುವ ಉದ್ದೇಶದಿಂದ ತಂಡದ ಸದಸ್ಯರೆಲ್ಲ ಸೇರಿ ಹಣ ಹಾಕಿ, ೨.೫೦ ಲಕ್ಷ ಮಾತ್ರೆಗಳನ್ನು ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್ಗಳಲ್ಲಿಯೂ ಈ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲಾಗುವುದು ಎಂದು ಹೇಳಿದರು.
ಕೇಂದ್ರದ ಆಯುಷ್ ಇಲಾಖೆ ಒಪ್ಪಿರುವ ರ‍್ಸಿನಂ ಅಲ್ಬಂ ೩೦ಸಿ ಮಾತ್ರೆಗಳನ್ನು ೧೫ ವರ್ಷಕ್ಕಿಂತ ಕೆಳಗಿನವರು ಸತತ ಮೂರು ದಿನ ೬ ಮಾತ್ರೆಗಳನ್ನು, ೧೫ ವರ್ಷ ಮೇಲ್ಪಟ್ಟವರು ಸತತ ಮೂರು ದಿನ ೧೨ ಮಾತ್ರೆಗಳನ್ನು ಸೇವಿಸಿದರೆ ಅವರಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಈ ಮೂಲಕ ಕೊರೋನಾವನ್ನು ದೂರ ಮಾಡಬಹುದಾಗಿದ್ದು, ಫ್ರೆಂಟ್ ಲೈನ್ ಕೋವಿಡ್-೧೯ ವಾರಿರ‍್ಸ್ ತಂಡ ಈ ಕಾರ್ಯಕ್ಕೆ ಪಾಲಿಕೆ ಸದಸ್ಯರಾದ ಗಿರಿಜಾಧನಿಯಾಕುಮಾರ್ ಅವರು ಉತ್ತಮ ಸಹಕಾರ ನೀಡಿದ್ದು, ಅವಶ್ಯಕತೆ ಇದ್ದರೆ ಇನ್ನು ಹೆಚ್ಚಿನ ಮಾತ್ರೆಗಳನ್ನು ತರಿಸಿ ಜನರಿಗೆ ಉಚಿತವಾಗಿ ಹಂಚಲಾಗುವುದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos