ಫೆ. 7ಕ್ಕೆ ‘ಜಂಟಲ್ ಮ್ಯಾನ್’ ತೆರೆಯ ಮೇಲೆ

ಫೆ. 7ಕ್ಕೆ ‘ಜಂಟಲ್ ಮ್ಯಾನ್’ ತೆರೆಯ ಮೇಲೆ

ಬೆಂಗಳೂರು, ಜ. 23: ಕನ್ನಡ ಚಿತ್ರರಂಗದಲ್ಲಿ ಡೈನಾಮಿಕ್ ಪ್ರಿನ್ಸ್ ಎಂದೇ ಹೆಸರು ಪಡೆದಿರುವ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ ಮ್ಯಾನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಟ್ರೈಲರ್ ಮತ್ತು ಹಾಡುಗಳಿಂದ ಸದ್ದು ಮಾಡ್ತಿರುವ ಜಂಟಲ್ ಮ್ಯಾನ್ ಇದೇ ಫೆ. 7 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಪ್ರಜ್ವಲ್ ವೃತ್ತ ಜೀವನದಲ್ಲಿ ಈ ಸಿನಿಮಾ ಬಹಳ ವಿಶೇಷವಾಗಿರಲಿದೆ ಎಂದು ಹೇಳಲಾಗುತ್ತಿದೆ. ಥ್ರಿಲ್ಲಿಂಗ್ ಕಥಾಹಂದರವನ್ನು ಜಂಟಲ್ ಮ್ಯಾನ್ ದೇವರಾಜ್ ಪುತ್ರನಿಗೆ ಹೊಸ ಇಮೇಜ್ ನೀಡಬಹುದು. ‘ಲೈಫ್ ಜೊತೆ ಒಂದು ಸೆಲ್ಫಿ’ ಸಿನಿಮಾ ಬಳಿಕ ಪ್ರಜ್ವಲ್ ಅಭಿನಯದ ಸಿನಿಮಾ ಬರ್ತಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos