ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಕೊಂಚ ರಿಲೀಫ್ ಸಿಕ್ಕಂತಾಗಿತ್ತು. ಆದರೆ ಇದೀಗ ಯಡಿಯೂರಪ್ಪ ವಿರುದ್ಧ ಈ ಕೇಸು ಮತ್ತೆ ಸ್ಟ್ರಾಂಗ್ ಆಗಲಿರುವ ಮಾಹಿತಿ ಹೊರ ಬಿದ್ದಿದ್ದು ಕೇಸು ದಾಖಲಿಸಿದ ಮಹಿಳೆಯು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಇದೀಗ ತನಿಖೆಗೆ ಆಗ್ರಹಿಸಿದ್ದಾರೆ.
ಹೌದು, ಬಿಎಸ್ ಯಡಿಯೂರಪ್ಪ ತನ್ನ 17 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ 54 ವರ್ಷದ ಮಹಿಳೆ ಅನುಮಾನಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೊದಲ ಸಭೆಯ ನಿರ್ಣಯಗಳನ್ನು ಚಾಚೂ ತಪ್ಪದೆ, ಗುಣಮಟ್ಟದಿಂದ ನಿರ್ವಹಿಸಿ: ಸಿಎಂ
ಈ ಕುರಿತಂತೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆಯ ಕುಟುಂಬ ಮತ್ತು ಕೆಲವು ಮಹಿಳಾ ಸಂಘಟನೆಗಳಿಂದ ಮಹಿಳೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುರುವುದರಿಂದ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇನೆ. ಮಹಿಳೆಯ ಸಾವಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಪೊಲೀಸರಿಂದ ವರದಿ ಕೇಳಿದ್ದೇನೆ ಎಂದಿದ್ದಾರೆ. ಮಹಿಳೆ ಸಾವಿಗೆ 2 ದಿನಗಳ ಮೊದಲು, ಮಹಿಳೆ ಮತ್ತೊಂದು ದೂರಿನ ಸಂಬಂಧ ಚರ್ಚಿಸಲು ನನ್ನ ಕಚೇರಿಗೆ ಬಂದಿದ್ದರು. ಸಾಯಂಕಾಲದವರೆಗೂ ನನ್ನ ಜೊತೆಗಿದ್ದವಳಿಗೆ ಯಾವುದೇ ರೀತಿಯ ಅನಾರೋಗ್ಯ ಕಾಣಿಸಿರಲಿಲ್ಲ. ಆಕೆ ಕ್ಯಾನ್ಸರ್ ಬಗ್ಗೆ ಏನನ್ನೂ ಹೇಳಲಿಲ್ಲ. 2 ದಿನಗಳ ನಂತರ, ಅವಳು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾಳೆಂದು ನನಗೆ ತಿಳಿಯಿತು.
ಹಾಗಾಗಿ ಇದು ಅನುಮಾನ ಪದ ಸಾಬು ಎಂಬುದು ಇದೀಗ ತಿಳಿದುಬಂದಿದ್ದು ಈ ಮಹಿಳೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಮೂಲ ದಾಖಲೆಗಳನ್ನು ಒದಗಿಸಬೇಕೆಂದು ನಾನು ಈಗಾಗಲೇ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಹೇಳಿದರು