ಪ್ರವಾಸಿಗರಿಗೆ ಸಿಹಿಸುದ್ದಿ

ಪ್ರವಾಸಿಗರಿಗೆ  ಸಿಹಿಸುದ್ದಿ

ಪಣಜಿ, ಜುಲೈ.03 : ಕೊರೊನಾ ಸೋಂಕು ಹರಡುವಿಕೆ ಭೀತಿ ನಡುವೆಯೇ ಪ್ರವಾಸೋದ್ಯಮಕ್ಕೆ ಗೋವಾ ಸರ್ಕಾರವು ಮುಕ್ತ ಅವಕಾಶ ನೀಡಿದೆ. ಗೋವಾಗೆ ತೆರಳುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ಘೋಷಿಸಿದೆ.
ಶುಕ್ರವಾರದಿಂದ ಗೋವಾದಲ್ಲಿ 250 ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ಪುನಾರಂಭಿಸುವುದಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರವಾಸೋದ್ಯ ಸಚಿವ ಮನೋಹರ್ ಅಜಗಾನ್ಕರ್ ಮಾಹಿತಿ ನೀಡಿದ್ದಾರೆ. ದೇಶೀಯ ವಿಮಾನಯಾನ ಸಂಚಾರದಲ್ಲಿ ಜುಲೈ.02ರಿಂದಲೇ ಅನುಮತಿ ನೀಡಿದ್ದು, ಪ್ರಯಾಣಿಕರಿಗೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಈ ಕುರಿತು ಗೋವಾ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದು ಪ್ರವಾಸೋದ್ಯಮ ಸಚಿವ ಮನೋಹರ್ ಅಜಗಾನ್ಕರ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos