ಪುರಸಭೆ ನಾಮ ಫಲಕದಲ್ಲಿ ಉರ್ದು ಭಾಷೆ ಅಳವಡಿಕೆಗೆ : ಮನವಿ

ಪುರಸಭೆ ನಾಮ ಫಲಕದಲ್ಲಿ ಉರ್ದು ಭಾಷೆ ಅಳವಡಿಕೆಗೆ : ಮನವಿ

ಕೆಂಭಾವಿ : ಪಟ್ಟಣದ ಪುರಸಭೆ ನಾಮ ಫಲಕದಲ್ಲಿ ಉರ್ದು ಭಾಷೆಯನ್ನು ಅಳವಡಿಸುವಂತೆ . ಕೆಂಭಾವಿ ಪಟ್ಟಣದ ಪುರಸಭೆಯ ಮುಖ್ಯ ಅಧಿಕಾರಿಗೆ ಶುಕ್ರವಾರ ಟಿಪ್ಪುಸುಲ್ತಾನ ಅಭಿಮಾನಿಗಳ ಮಹಾ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷ ಬಂದೇನವಾಜ ನಾಲತವಾಡ ಕೆಂಭಾವಿ ಪಟ್ಟಣದಲ್ಲಿ ಶೇ 30 ರಷ್ಟು ಜನ ಉರ್ದು ಭಾಷಿಗರು ಇದ್ದು , ಈ ಕೂಡಲೆ ಅಧಿಕಾರಿಗಳ ಸಮೀಪದ ಶಹಾಪೂರ ಮತ್ತು ನಮ್ಮದೆ ತಾಲ್ಲೂಕು ಸುರಪುರದ ನಗರಸಭೆಗಳಲ್ಲಿ , ಕನ್ನಡ, ಇಂಗ್ಲೀಷ್, ಮತ್ತು ಉರ್ದು ಭಾಷೆಗಳಲ್ಲಿ ನಾಮ ಫಲಕವನ್ನು ಅಳವಡಿಸಿದ್ದು , ಅದರಂತೆಯೇ ಕೆಂಭಾವಿ ಪಟ್ಟಣದ ಪುರಸಭೆಯ ನಾಮ ಫಲಕದಲ್ಲಿ ಅಳವಡಿಸ ಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಪುರಭೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos