ಪ್ರೀತಿಗಾಗಿ ಹೀಗೆ ಮಾಡಿದ್ಯಾಕೆ..!!!

   ಪ್ರೀತಿಗಾಗಿ ಹೀಗೆ ಮಾಡಿದ್ಯಾಕೆ..!!!

ಹೈದರಾಬಾದ್ , ಜ. 31 : ಲವ್ ಇಸ್ ಬ್ಲೈಂಡ್ ಅಂತಾರೆ.. ಪ್ರೀತಿ ಸಂಪಾದನೆಗೆ ಏನೆಲ್ಲ ಮಾಡ್ತಾರೆ.. ಪ್ರೀತಿಗಾಗಿ ಜೀವ ಕಳೆದುಕೊಳ್ಳುತ್ತಾರೆ, ಕೈ ಕಾಲು ಕೂಯ್ದು ಕೊಂಡು ರಕ್ತದಲ್ಲಿ ಪತ್ರ ಬರೆಯುತ್ತಾರೆ… ಇನ್ನೂ ಏನೇನೋ ಮಾಡುತ್ತಾರೆ. ಆದರೆ ಅವರಿಗೆ ಪ್ರೀತಿ ಸಂಪಾದನೆ ಅಷ್ಟೆ ಮುಖ್ಯ.. ಪ್ರೀತಿ ಸಂಪಾದನೆಗಾಗಿ ಜನ ಏನ್ ಬೇಕಾದ್ರೂ ಮಾಡಲು ಸಿದ್ದರಿರುತ್ತಾರೆ…   11 ವರ್ಷದ ಪ್ರೀತಿಗಾಗಿ ಕ್ರಿಶ್ಚಿಯನ್‍ನಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವಕನೋರ್ವ ಈಗ ಪ್ರೇಯಸಿಗಾಗಿ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾನೆ. ಕ್ರಿಶ್ಚಿಯನ್ ಆಗಿದ್ದ ಬಾಬ್ಬಿಲಿ ಭಾಸ್ಕರ್(26) ಮುಸ್ಲಿಂ ಯುವತಿಯನ್ನು ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದಾನೆ. ಆದರೆ ಯುವತಿ ತಂದೆ ನೀನು ಮುಸ್ಲಿಂ ಆಗಿ ಮತಾಂತರಗೊಂಡರೆ ನನ್ನ ಮಗಳನ್ನು ನಿನ್ನ ಜೊತೆ ಮಾದುವೆ ಮಾಡಿಸುತ್ತೇನೆ ಎಂದು ಷರತ್ತು ಹಾಕಿದ್ದರು. ಆದ್ದರಿಂದ ಬಾಬ್ಬಿಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡನು. ಬಳಿಕ ತನ್ನ ಹೆಸರನ್ನು ಮೊಹ್ಮದ್ ಅಬ್ದುಲ್ ಎಂದು ಬದಲಿಸಿಕೊಂಡನು.

ನಾನು ಮತಾಂತರಗೊಂಡಿದ್ದೇನೆ ಇನ್ನಾದರೂ ನನ್ನ ಪ್ರೇಯಸಿಯನ್ನು ಮದುವೆ ಆಗಿ ಚೆನ್ನಾಗಿರಬಹುದು ಎಂದು ಮೊಹ್ಮದ್ ಖುಷಿಯಾಗಿದ್ದನು. ಇದೇ ಖುಷಿಯಲ್ಲಿ ಪ್ರೇಯಸಿ ಮನೆಗೆ ಮೊಹ್ಮದ್ ಮದುವೆ ಬಗ್ಗೆ ಮಾತನಾಡಲು ಹೋಗಿದ್ದಾನೆ. ಆದರೆ ಯುವತಿ ತಂದೆ ಮಾತ್ರ, ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಲ್ಲ ಎಂದು ವರಸೆ ಬದಲಿಸಿದ್ದಾರೆ ಎಂದು ಮೊಹ್ಮದ್ ಆರೋಪಿಸಿದ್ದಾನೆ. ಜೊತೆಗೆ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos