2023ರಿಂದ 4 ದಿನಗಳಿಗೆ ಮಾತ್ರ ಟೆಸ್ಟ್ ಪಂದ್ಯ

2023ರಿಂದ 4 ದಿನಗಳಿಗೆ ಮಾತ್ರ ಟೆಸ್ಟ್ ಪಂದ್ಯ

ಮೆಲ್ಬರ್ನ್ , ಡಿ. 31: 2023ರಿಂದ ವಿಶ್ವ ಚಾಂಪಿಯನ್ಶಿಪ್ ವ್ಯಾಪ್ತಿಗೆ ಸೇರುವ ಟೆಸ್ಟ್ ಪಂದ್ಯಗಳನ್ನು 5 ದಿನಗಳ ಬದಲಾಗಿ ಕಡ್ಡಾಯವಾಗಿ 4 ದಿನಗಳ ಕಾಲ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಚಿಂತನೆ ನಡೆಸಿದೆ.

ಪ್ರಮುಖವಾಗಿ, ನಿರಂತರ ಕ್ರಿಕೆಟ್ ಟೂರ್ನಿಗಳನ್ನು ತಡೆಯಲು ಈ ಯೋಜನೆ ರೂಪಿಸಿರುವುದಾಗಿ ಐಸಿಸಿ ತಿಳಿಸಿದೆ. 2017ರ ಅಕ್ಟೋಬರ್ನಲ್ಲಿ ಐಸಿಸಿ 4 ದಿನಗಳ ಟೆಸ್ಟ್ ಆಯೋಜನೆಗೆ ಅನುಮತಿ ನೀಡಿತ್ತು. ಆದರೆ ಪಂದ್ಯಕ್ಕೆ ಆತಿಥ್ಯ ವಹಿಸುವ ಕ್ರಿಕೆಟ್ ಮಂಡಳಿಗೆ ನಿರ್ಧರಿಸುವ ಅವಕಾಶ ನೀಡಲಾಗಿತ್ತು.

2023ರಿಂದ 2031ರ ನಡುವಿನ ಕ್ರಿಕೆಟ್ ಋುತುಗಳಲ್ಲಿ ಟೆಸ್ಟ್ ಪಂದ್ಯಗಳನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವುದರಿಂದ ಹೆಚ್ಚು ಜಾಗತಿಕ ಮಟ್ಟದ ಟೂರ್ನಿಗಳು, ಬಿಸಿಸಿಐ ಬೇಡಿಕೆಯಂತೆ ಮತ್ತಷ್ಟು ದ್ವಿಪಕ್ಷೀಯ ಸರಣಿಗಳ ಆಯೋಜನೆ, ವಿಶ್ವದಾದ್ಯಂತ ನಡೆಯುವ ಟಿ20 ಲೀಗ್ಗಳ ಪ್ರಸರಣ ಹಾಗೂ 5 ದಿನಗಳ ಪಂದ್ಯಗಳ ಆಯೋಜನೆಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸದ್ಯ ಚಾಲ್ತಿಯಲ್ಲಿರುವ 2015-2023ರ ಅವಧಿಯಲ್ಲಿ 5 ದಿನಗಳ ಬದಲಿಗೆ 4 ದಿನಗಳ ಟೆಸ್ಟ್ ಪಂದ್ಯಗಳನ್ನು ನಡೆಸಿದ್ದು, 335 ದಿನಗಳು ಉಳಿಯುತ್ತಿದ್ದವು ಎಂದು ಐಸಿಸಿ ಅಂದಾಜಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos