ಮುಳಬಾಗಿಲು: ಪ್ರಸಿದ್ದಿ ಹೆಸರು ವಾಸಿಯಾಗಿರುವ ಕುರುಡುಮಲೆ ಗಣಪತಿ ದೇವಸ್ಥಾನ ದಲ್ಲಿ ಎಂದಿನಂತೆ ಪ್ರತಿ ವರ್ಷ ಗಣಪತಿ ಹಬ್ಬದಲ್ಲಿ ಗಣಪತಿ ಉತ್ಸವಗಳು ಹಾಗೂ ರಥೋತ್ಸವಗಳು ನಡೆಯುತ್ತವೆ ಇಲ್ಲಿಗೆ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪನವರು ದಂಪತಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಾನ್ಯ ಸಚಿವರು ಪೂಜೆಯನ್ನು ಸಲ್ಲಿಸಿ ನಾಡಿನ ಜನತೆಗೆ ಉತ್ತಮವಾದ ಮಳೆಯಾಗಿ ನಾಡಿನ ಜನ ಸುಭೀಕ್ಷವಾಗಿರಬೇಕೆಂದು ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.
ಮುಳಬಾಗಿಲು ಶಾಸಕರಾದ ಸಮೃದ್ದಿ ಮಂಜುನಾಥ, ರಾಮಪ್ರಸಾದ್ ,ಊರಬಾಗಿಲು ಶ್ರೀನಿವಾಸ ,ರಾಮಪ್ರಸಾದ್,ರಾಮಲಿಂಗಾರೆಡ್ಡಿ,ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.