ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಂತೆ ಐದು ಪಟ್ಟು ಭತ್ಯೆ ಹೆಚ್ಚಳ!

ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಂತೆ ಐದು ಪಟ್ಟು ಭತ್ಯೆ ಹೆಚ್ಚಳ!

ನವದೆಹಲಿ, ಏ. 22, ನ್ಯೂಸ್ ಎಕ್ಸ್ ಪ್ರೆಸ್: 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಸೋಮವಾರ(ಏಪ್ರಿಲ್ 22) ಶುಭ ಸುದ್ದಿ ಸಿಕ್ಕಿದೆ. ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ ಸರ್ಕಾರಿ ನೌಕರರ ಭತ್ಯೆ ಹೆಚ್ಚಳ ಕುರಿತಂತೆ ಹೊಸದಾದ ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಇಲಾಖೆ ಹೊರಡಿಸಿರುವ ಪ್ರಕಟಣೆಯಂತೆ ಐದು ಪಟ್ಟು ಭತ್ಯೆ ಹೆಚ್ಚಳ ಸಿಗಲಿದೆ. ಸರ್ಕಾರಿ ಹುದ್ದೆ ಸೇರಿದ ಬಳಿಕ ಸ್ನಾತಕೋತ್ತರ ಪದವಿ ಪಡೆದವರಿಗೆ ಈ ಸೌಲಭ್ಯ ಸಿಗಲಿದೆ. ಇದೀಗ ಉನ್ನತ ಪದವಿ ಪಡೆದವರಿಗೆ 10,000 ರು ನಿಂದ 30,000 ರು ತನಕ ಲಂಪ್ ಸಮ್ ನಂತೆ ಒಮ್ಮೆಗೆ ಭತ್ಯೆ ಸಿಗಲಿದೆ. ಪದವಿ ಅಥವಾ ಮೂರು ವರ್ಷಗಳ ಅವಧಿ ಅಥವಾ ಅದಕ್ಕಿಂತ ಕೆಳಮಟ್ಟದಾ ತತ್ಸಮಾನ ಅರ್ಹತೆಯುಳ್ಳವರಿಗೆ ಕನಿಷ್ಠ 10,000 ರು ಭತ್ಯೆ ಸಿಗಲಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರುನಿಂದ 26,000 ರು ಗೇರಿಸುವಂತೆ ಕೋರಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos