ಆಯುರ್ ಮಾತಾ ದೇವಾಲಯದ ಪ್ರಥಮ ವಾರ್ಷಿಕೋತ್ಸವ

ಆಯುರ್ ಮಾತಾ ದೇವಾಲಯದ ಪ್ರಥಮ ವಾರ್ಷಿಕೋತ್ಸವ

ಬೊಮ್ಮನಹಳ್ಳಿ, ಫೆ. 26: ಬೊಮ್ಮನಹಳ್ಳಿ ದಕ್ಷಿಣ ಭಾರತದ ಜನತೆ ಚಾಮುಂಡೇಶ್ವರಿಯನ್ನು ಆರಾಧಿಸುವಂತೆ ಉತ್ತರ ಭಾರತದ ಮಂದಿ ಅದರಲ್ಲೂ ರಾಜಸ್ಥಾನ್, ಗುಜರಾತ್‌ರವರು ಆಯುರ್ ಮಾತಾ ದೇವಿಯನ್ನು ಆರಾಧಿಸುತ್ತಾರೆ. ಮಾತೆಯ ಆಶೀರ್ವಾದ ಸರ್ವರಿಗೂ ಲಭಿಸಲಿ ಎಂದು ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ನುಡಿದರು.

ಹೆಚ್‌ಎಸ್‌ಆರ್ ಬಡಾವಣೆಯ 7ನೇ ಹಂತದಲ್ಲಿರುವ ಆಯುರ್ ಮಾತಾ ದೇವಾಲಯದ ಪ್ರಥಮ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಜಂಟಿ ಆಯುಕ್ತ ರಾಮಕೃಷ್ಣರವರು ಭಾಗವಹಿಸಿದ್ದರು. ಸಿರಿವಿ ಸಮಾಜದ ನೇತೃತ್ವದಲ್ಲಿ ಆಯುರ್ ಮಾತಾ ದೇವಾಲಯದ ಪ್ರಥಮ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದು, ವಿಶೇಷ ಪೂಜೆ, ದೇವಿಯ ಅಲಂಕಾರ ಹಾಗೂ ಹೋಮವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿರಿವಿ ಸಮಾಜದ ಅಧ್ಯಕ್ಷರಾದ ಪಾವುಲಾಲ್, ಪ್ರಧಾನ ಕಾರ್ಯದರ್ಶಿ ಲಕ್ಷö್ಮಣ್, ಸಂಘದ ಮುಖ್ಯಸ್ಥರಾದ ಚಲ್ಲಾರಾಂ ಸೇರಿದಂತೆ ಹಲವರು ಭಾಗವಹಿಸಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos