ಬೆಂಕಿ ಹಚ್ಚಿಕೊಂಡ ಅತ್ತೆ-ಸೊಸೆ

ಬೆಂಕಿ ಹಚ್ಚಿಕೊಂಡ ಅತ್ತೆ-ಸೊಸೆ

ತುಮಕೂರು, ಡಿ. 8 : ಕ್ಷುಲ್ಲಕ ವಿಚಾರಗಳಿಗೆ ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಜಗಳವಾಡುತ್ತಿದ್ದ ಅತ್ತೆ ಸೊಸೆ ಇಬ್ಬರೂ ಪರಸ್ಪರ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಸಂದ್ರ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಹೆಗ್ಗೆರೆ ಬಳಿಯ ಗಂಗಸಂದ್ರದಲ್ಲಿ ನಡೆದ ಅತ್ತೆ-ಸೊಸೆಯರ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ. ಗಂಗಸಂದ್ರ ಗ್ರಾಮದ ದೊಡ್ಡ ನಂಜಯ್ಯ ಎಂಬುವರ ಪತ್ನಿ ಪಾರ್ವತಮ್ಮ (75), ಈಕೆಯ ಮಗ ಕುಮಾರಯ್ಯನ ಪತ್ನಿ ರಾಜೇಶ್ವರಿ (45) ಬೆಂಕಿಗೆ ಆಹುತಿಯಾದವರು.ಕಳೆದ ಮೂರು-ನಾಲ್ಕು ವರ್ಷಗಳಿಂದ ಅತ್ತೆ ಸೊಸೆಯರು ಮನೆಯಲ್ಲಿ ಆಗಾಗ ಜಗಳವಾಡುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos