ನಟ ದರ್ಶನ್ ನಾಯಿ ಮೇಲೆ  ಎಫ್ಐಆರ್!

ನಟ ದರ್ಶನ್ ನಾಯಿ ಮೇಲೆ  ಎಫ್ಐಆರ್!

ಬೆಂಗಳೂರು: ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ನಾಯಿ ಕಚ್ಚಿಸಿದ ಆರೋಪ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ. ವೈದ್ಯ ಅಮಿತ್ ಜಿಂದಾಲ್ ಎಂಬುವರರು ಆರ್. ಆರ್‌. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ತಿಂಗಳ 28 ರಂದು ದೂರುದಾರ ಅಮಿತ್‌, ಖಾಸಗಿ ಆಸ್ಪತ್ರೆಯ ಕಾರ್ಯಕ್ರಮದ ನಿಮಿತ್ತ ದರ್ಶನ್ ಮನೆ ಬಳಿ ಹೋಗಿದ್ದರು. ಆ ವೇಳೆ ತಮ್ಮ ಕಾರನ್ನು ದರ್ಶನ್ ಮನೆ ಬಳಿ ಪಾರ್ಕಿಂಗ್ ಮಾಡಿದ್ದರು.

ಕಾರ್ಯಕ್ರಮ ಮುಗಿಸಿ ಕಾರು ತಗೆದುಕೊಳ್ಳು ಹೋದಾಗ ದರ್ಶನ್ ಮನೆಯ ಸಾಕು ನಾಯಿ ನೋಡಿಕೊಳ್ಳುತ್ತಿದ್ದ  ಮನೆ ಕೆಲಸದವರು ಬೇಕಂತಲೇ ಪಾರ್ಕಿಂಗ್ ವಿಚಾರಕ್ಕೆ ವೈದ್ಯರ ಬಳಿ ಕಿರಿಕ್ ತೆಗೆದಿದ್ದಾರೆ.ಆ ವೇಳೆ ವೈದ್ಯರಿಗೆ ದರ್ಶನ್ ಅವರ ಸಾಕು ನಾಯಿ ಹೊಟ್ಟೆ ಭಾಗಕ್ಕೆ ಕಚ್ಚಿದೆ. ಇದಕ್ಕೂ ಮೊದಲು ಕಾರು ತೆಗೆದುಳಕೊಳ್ಳಬೇಕು ನಾಯಿಯನ್ನ ಬೇರೆಡೆ ಕರೆದುಕೊಂಡು ಹೋಗುವಂತೆ ಹೇಳಿದ್ದರಂತೆ.ಆ ವೇಳೆ ಇಬ್ಬರ ನಡುವೆ ವಾಗ್ವಾದ ನಡೆಯುವ ವೇಳೆ  ಎರಡು ನಾಯಿ ವೈದ್ಯೆಯ ಮೇಲೆ ಜಿಗಿದು ಕಚ್ಚಿರುವ ಆರೋಪ ಕೇಳಿ ಬಂದಿದೆ.

ಆ ಹಿನ್ನೆಲೆ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ಎರಡನೇ ಆರೋಪಿಯಾಗಿ ದರ್ಶನ್ ವಿರುದ್ದ ವೈದ್ಯರು ದೂರು ದಾಖಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos