ತಂದೆಯನ್ನೇ ಹತ್ಯೆಗೈದ ದತ್ತು ಮಗಳು

ತಂದೆಯನ್ನೇ ಹತ್ಯೆಗೈದ ದತ್ತು ಮಗಳು

ಮುಂಬಯಿ, ಡಿ. 8 : ಸಮುದ್ರದಲ್ಲಿ ತೇಲಿ ಬಂದ ಸೂಟ್ ಕೇಸ್ ನ ರಹಸ್ಯವನ್ನು ಪೊಲೀಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ದತ್ತು ಪಡೆದ ಮಗಳೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತಂದೆಯನ್ನೇ ಹತ್ಯೆಗೈದು ಸೂಟ್ ಕೇಸ್ ನಲ್ಲಿ ತುಂಬಿಸಿ ಮಾಹಿಮ್ ಬೀಚ್ ನಲ್ಲಿ ಎಸೆದು ಹೋದ ಘಟನೆ ಇದಾಗಿದೆ. ಸೋಮವಾರ ಸಂಜೆ ಮಾಹಿಮ್ ಸಮುದ್ರ ತೀರದಲ್ಲಿ ಕಪ್ಪು ಬಣ್ಣದ ಸೂಟ್ ಕೇಸ್ ಒಂದು ಕಂಡುಬಂದಿದ್ದು ಅದನ್ನು ತೆರೆದ ಪೋಲಿಸರು ಅರೆಕ್ಷಣ ಬೆಚ್ಚಿಬಿದ್ದಿದ್ದರು. ಅದರಲ್ಲಿ ಭುಜದಿಂದ ಬೇರ್ಪಡಿಸಲ್ಪಟ್ಟ ಒಂದು ಕೈ ಮತ್ತು ಕಾಲಿನ ಒಂದು ಭಾಗ ಹಾಗೂ ಗಂಡಸಿನ ಮರ್ಮಾಂಗದ ಭಾಗಗಳನ್ನು ತುಂಬಿಸಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos