ಭರ್ಜರಿ ಲುಕ್ ನಲ್ಲಿ ‘ಅಶ್ವ’ ಚಿತ್ರದ ಫಸ್ಟ್ ಲುಕ್ ರಿಲೀಸ್

ಭರ್ಜರಿ ಲುಕ್ ನಲ್ಲಿ ‘ಅಶ್ವ’ ಚಿತ್ರದ ಫಸ್ಟ್ ಲುಕ್ ರಿಲೀಸ್

ಬೆಂಗಳೂರು,16,06. 2020: ಸ್ಯಾಂಡಲ್‌ವುಡ್‌ ನಲ್ಲಿ ಹೊಸಬರ ಅಲೆ ಜೋರಾಗಿದೆ. ಹೊಸ ಹೊಸ ಪ್ರತಿಭೆಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಾನೆ ಇರ್ತಾರೆ. ಅದರಲ್ಲೂ ನಿರ್ಮಾಪಕ ನಿರ್ದೇಶಕ ಹಾಗೂ ಹೊಸ ನಟ-ನಟಿಯರ ಹಾವಳಿ ಹೆಚ್ಚಾಗುತ್ತಿದೆ.
ಹೌದು, ಅಂದು ಸಹಾಯಕ ನಿರ್ದೇಶಕ, ಸಹ ನಿರ್ದೇಶಕ, ಸಹಕಾರ ನಿರ್ದೇಶಕ, ಸಂಕಲನ ಸಹಾಯಕ, ಬರಹಗಾರ ಹಾಗೂ ಸಂಭಾಷಣೆಗಾರರಾಗಿ ಚಿತ್ರರಂಗದಲ್ಲಿ ಹಲವಾರು ರೀತಿಯ ಕೆಲಸ ಮಾಡಿದ್ದ ಎ. ಆರ್. ಸಾಯಿ ರಾಮ್ ಈಗ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕದಲ್ಲಿ ಸುಮಾರು 15 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಏಳು ಬೀಳುಗಳ ಪರಿಶ್ರಮದಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನ ಬಡ್ತಿಯೊಂದಿಗೆ ಇಂದು ತನ್ನ ಚೊಚ್ಚಲ ನಿರ್ದೇಶನ “ಅಶ್ವ” ಚಿತ್ರದ ಮೂಲಕ, ಪರಿಣಿತರ ತಂತ್ರಜ್ಞರ ತಂಡದ ಜೊತೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದ್ದು, ಉದಯೋನ್ಮುಖ ನಟ ಹೊಸ ಪ್ರತಿಭೆ “ವಿವನ್ ಕೆ ಕೆ” ಅಶ್ವ” ಚಿತ್ರದ ನಾಯಕನಾಗಿ ಬಣ್ಣಹಚ್ಚಲಿದ್ದಾರೆ. ಪ್ರಮುಖ ಪಾತ್ರದಲ್ಲಿ ನಾಗೇಂದ್ರ ಅರಸ್, ಬಲರಾಜ್ವಾಡಿ, ಪವನ್ ಕುಮಾರ್(ಪಚ್ಚಿ), ಯಶ್ ಶೆಟ್ಟಿ ನಂದಗೋಪಾಲ್, ಸೂರಿ ಹಾಗೂ ಮತ್ತಿತರ ತಾರಾಬಳವಿದೆ.ಜೊತೆಗೆ ವಿವನ್ ಗೆ ಜೋಡಿಯಾಗಿ ಸಾರಿಕಾ ಹಾಗೂ ಸಾಗರಿಕ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡದ ಹೆಸರಾಂತ ನಿರ್ದೇಶಕ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ರವಿಕುಮಾರ್ ಸನ ಅವರು ಕ್ಯಾಮರಾ ಕೈಚಳಕ ತೋರಿಸಲಿದ್ದಾರೆ. ಶ್ರೀಕಾಂತ ಗೌಡ ಸಂಕಲನ, ಡ್ಯಾನ್ಸ್ ಕೋರಿಯೊಗ್ರಾಫರ್ ಆಗಿ ಧನಂಜಯ್, ಸಾಹಸ ಕುನ್ಫ್ಯೂ ಚಂದ್ರು ಹಾಗೂ ತುಳಸಿ ರಾಮ್ ರಾಜ್ ಪ್ರಚಾರ ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಅಶ್ವ ಚಿತ್ರದ ಮೂಲಕ ನಿರ್ದೇಶಕರಾಗಿ ಸಾಯಿ ರಾಮ್ ಹಾಗೂ ಹೊಸ ನಟ ವಿವನ್ ಅವರಿಗೆ ಶುಭ ಹಾರೈಸೋಣ.

ಫ್ರೆಶ್ ನ್ಯೂಸ್

Latest Posts

Featured Videos