ಫ್ಯಾಷನ್ ಡಿಸೈನಿಂಗ್ ತರಬೇತಿ

ಫ್ಯಾಷನ್ ಡಿಸೈನಿಂಗ್ ತರಬೇತಿ

ಬೊಮ್ಮನಹಳ್ಳಿ, ಡಿ. 04: ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಡಿ ಫ್ಯಾಷನ್ ಡಿಸೈನಿಂಗ್ ತರಬೇತಿಯನ್ನು ಇಂದು ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ರವರು ಹಾಗೂ ಹೊಂಗಸಂದ್ರ ಪಾಲಿಕೆ ಸದಸ್ಯೆ ಶ್ರೀಮತಿ. ಭಾರತಿ ರಾಮಚಂದ್ರರವರು ಹೊಂಗಸಂದ್ರ ಶಾಖೆಯನ್ನು ಉದ್ಘಾಟಿಸಿದರು.

ಶಾಸಕರು ಫಲಾನುಭವಿಗಳನ್ನುದ್ದೇಶಿಸಿ ಮಾತನಾಡುತ್ತಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಸದರಿ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದರು. ಇಂದು ಫ್ಯಾಷನ್ ಡಿಸೈನಿಂಗ್ ಹೆಚ್ಚು ಮಹಿಳೆಯರನ್ನು ಆಕರ್ಷಿಸುತ್ತಿದ್ದು, ಈ ತರಬೇತಿಯನ್ನು ಪಡೆದ ಮಹಿಳೆಯರು ಮನೆಯಲ್ಲೇ ಕುಳಿತು ಆರ್ಥಿಕವಾಗಿ ಸಬಲರಾಗಬಹುದು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಜ್ಯುವೆಲರಿ, ಬ್ಯಾಂಗಲ್‌ಗಳದ್ದೇ ಮೇಲುಗೈ. ಇಂದು ಆರ್ಟಿಫಿಷಲ್ ಜ್ಯುವೆಲರಿಗಳಿಗೆ ಮುಕ್ತ ಮಾರುಕಟ್ಟೆ ಲಭ್ಯವಿದೆ. “ಕಲಿಕೆ” ಯಷ್ಟೆ ಬಹುಮುಖ್ಯ ಮಹಿಳೆ ಆರ್ಥಿಕವಾಗಿ ಸಬಲಗೊಳ್ಳುವುದೆಂದರು.

 

ಫ್ರೆಶ್ ನ್ಯೂಸ್

Latest Posts

Featured Videos