ಖ್ಯಾತ ನೃತ್ಯ ಸರೋಜ್  ವಿಧಿವಶ

ಖ್ಯಾತ ನೃತ್ಯ ಸರೋಜ್  ವಿಧಿವಶ

ಮುಂಬೈ, ಜು. 3 : ಮೂರು ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಸರೋಜ್ ಖಾನ್  ಶುಕ್ರವಾರ ವಿಧಿವಶರಾಗಿದ್ದಾರೆ.  ಪತಿ ಸೋಹನ್‌ಲಾಲ್, ಪುತ್ರ ಹಮೀದ್ ಖಾನ್ ,ಪುತ್ರಿ ಹೀನಾ ಖಾನ್ ಅವರನ್ನು ಅಗಲಿದ್ದಾರೆ. 72 ವರ್ಷದ ಸರೋಜ್ ಖಾನ್ ಅವರಿಗೆ ಕೊರೊನಾ ಪರೀಕ್ಷೆ ಕೂಡ ಮಾಡಲಾಗಿತ್ತು.  ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಉಸಿರಾಟದ ಸಮಸ್ಯೆ ಮತ್ತು ಇತರ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ  ಸರೋಜ್ ಖಾನ್ ಅವರನ್ನು ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ಕಳೆದ ಜೂ. 17ರಂದು ದಾಖಲಿಸಲಾಗಿತ್ತು. ಶುಕ್ರವಾರ  1.52 ಗಂಟೆಗೆ ಹೃದಯಾಘಾತದಿಂದ ಸರೋಜ್ ಖಾನ್ ಮೃತಪಟ್ಟರು ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.

‘ಡೋಲಾ ರೆ ಡೋಲಾ’, ಏಕ್ ದೋ ತೀನ್’, ಚೋಲಿ ಕೆ ಪೀಚೆ ಕ್ಯಾಹೆ’, ಸೇರಿದಂತೆ ಇನ್ನೂ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.  ಸರೋಜ್ ಖಾನ್ 1974 ರಲ್ಲಿ ಬಿಡುಗಡೆಯಾದ ಹಿಂದೆ ‘ನಾಮ್’ ಸಿನಿಮಾದ ಮೂಲಕ ನೃತ್ಯ ಸಂಯೋಜಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. 2 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos