ನಕಲಿ ಶಿಕ್ಷಕಿ ಸೇವೆಯಿಂದ ವಜಾ

  • In State
  • August 5, 2020
  • 671 Views
ನಕಲಿ ಶಿಕ್ಷಕಿ ಸೇವೆಯಿಂದ ವಜಾ

ಆನೇಕಲ್:ತಾಲೂಕಿನ ಇತಿಹಾಸದಲ್ಲಿ ೨೩ ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ, ಸೇವೆಯಿಂದ ಸರ್ಕಾರವೇ ವಜಾ ಮಾಡಿರುವ ಘಟನೆ ಮಾಯಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಟಿ.ಎಂ.ರತ್ನಮ್ಮ ಎಂಬುವರು ೨೩ ವರ್ಷಗಳ ಹಿಂದೆ ಫಿಸಿಕಲ್‌ಲಂಗವಿಕಲ ಕೋಟಾದ ಅಡಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾಗಿದ್ದರು.

ನಿಯಮಾನುಸಾರ ಯಾವುದೇ ಸರ್ಕಾರಿ ನೌಕರ ಅಂಗವಿಕರ ಕೋಟಾದಲ್ಲಿ ನೇಮಕಗೊಳ್ಳಲು ಶೇ.೪೦ ರಷ್ಟು ಅಂಗವೈಕಲ್ಯತೆ ಹೊಂದಿರಬೇಕು. ಆದರೆ ಟಿ.ಎಂ.ರತ್ನಮ್ಮ ಎಂಬುವರು ೨೨.೦೩.೧೯೯೭ ರಂದು ಕೆಲಸಕ್ಕೆ ಸೇರುವ ಸಮಯದಲ್ಲಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಶೇ.೫೦ ಅಂಗವೈಕಲ್ಯ ಇದೆ ಎಂದು ನಕಲಿ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಿ ಶಿಕ್ಷಣ ಸೇವೆಗೆ ನೇಮಕಾತಿ ಹೊಂದಿರುತ್ತಾರೆ.

ಲೋಕಾಯುಕ್ತರ ನಿರ್ದೇಶನದ ಮೇರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗವಿಕಲರ ಕೋಟಾದ ಅಡಿಯಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿರುವ ಎಲ್ಲಾ ಶಿಕ್ಷಕರನ್ನು ಮರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ನಿಯಮಾನುಸಾರ ೪೦% ಅಂಗವೈಕಲ್ಯದ ಬದಲಾಗಿ ೧೫%  ಮಾತ್ರ ಅಂಗವೈಕಲ್ಯ ಇದ್ದು, ಶಿಕ್ಷಕಿ ರತ್ನಮ್ಮನವರು ನಕಲಿ ಅಂಗ ವೈಫಲ್ಯ ಪ್ರಮಾಣಪತ್ರ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ರತ್ನಮ್ಮನವರನ್ನು ಶಿಕ್ಷಕಿ ವೃತ್ತಿಯಿಂದ ತಕ್ಷಣದಿಂದ ವಜಾಗೊಳಿಸಿರುವುದಾಗಿ ಇಲಾಖೆ ಆದೇಶವನ್ನು ಹೊರಡಿಸಿದೆ.

೨೩ ವರ್ಷಗಳ ಸುದೀರ್ಘ ಕಾನೂನು ಹೊರಟ ಮಾಡಿಕೊಂಡು ಬಂದ ನಿಜವಾದ ಅರ್ಹ ಫಲನುಭವಿಗೆ ೨೩ ವರ್ಷಗಳ ಕಾಲ ಶಿಕ್ಷಕಿ ರತ್ನಮ್ಮ ಪಡೆಯುತ್ತಿದ್ದ ವೇತನವನ್ನು ನೀಡಿ ಅರ್ಹ ಫಲಾನುಭವಿಯನ್ನು ವೃತ್ತಿಯಲ್ಲಿ ಮುಂದುವರಿಸಬೇಕು ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos