ಹಳದಿ ವಜ್ರಾಭರಣಗಳ ಪ್ರದರ್ಶನ ಮೇಳ

ಹಳದಿ ವಜ್ರಾಭರಣಗಳ ಪ್ರದರ್ಶನ ಮೇಳ

ಬೆಂಗಳೂರು,ಜ.16: ಪುರಾತನ‌ ಶೈಲಿಯ ಹಳದಿ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜ.18 ರಿಂದ 20ರ ವರೆಗೆ ರಾಜಾಜಿನಗರದ ಶೆರಟನ್ ಗ್ರ್ಯಾಂಡ್ ಹೋಟೆಲ್ ನಲ್ಲಿ‌ ಆಯೋಜಿಸಲಾಗಿದೆ ಎಂದು ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್.ಜಗದೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತ‌ನಾಡಿದ ಅವರು, ಅಭರಣ ಮೇಳವನ್ನು ನಟಿ ಆಶಿಕಾ ರಂಗನಾಥ್ ಉದ್ಘಾಟಿಸಲಿದ್ದು, ಹಳದಿ ವಜ್ರಗಳು ಹಾಗೂ 3ಡಿ ಮತ್ತು 5ಡಿ ಆಭರಣಗಳು, ನಿಜಾರಮರ ಕಾಲದಲ್ಲಿ ಧರಿಸುತ್ತಿದ್ದಂತಹ ಆಭರಣಗಳು ಹಾಗೂ 3 ಕೋಟಿ‌ ವೆಚ್ಚದ ಅತಿ ದೊಡ್ಡ ವಜ್ರದ ಅಭರಣವು ಪ್ರದರ್ಶನದಲ್ಲಿಡಲಾಗುವುದಾಗಿ ಅವರು ಹೇಳಿದರು.

ಇಲ್ಲಿ ಪ್ರದರ್ಶನದಲ್ಲಿಡುವ ಎಲ್ಲಾ ಬಗೆಯ ಚಿನ್ನದ ಅಭರಣಗಳು ಬಿಐಎಸ್ ಆಲ್ ಮಾರ್ಕ್ ಹೊಂದಿರಲಿದ್ದು, ಬೆಂಗಳೂರು ಆಭರಣ ,ಕ್ರಿಯೇಷನ್, ದವನಂ, ಎಂಪಿ ಸ್ವರ್ಣ ಮಹಲ್, ನವರತನ್, ಪಂಚಕೇಸರಿ, ಬಡೇರ, ಪಿಎಂಜಿ, ಶ್ರೀವಾರಿ, ವಿತ್ರಗ್, ಅಪ್ತಂಜ್, ಅಭೀರ ,ಕೋಲ್ಕತ ಅರಹಾಮ್, ವೈಜಾಗ್ ನ ವೈಭವ್ ಜ್ಯುವೆಲರಿ ಸೇರಿದಂತೆ ಭಾರತದ 50ಕ್ಕೂ ಹೆಚ್ಚು ಹೆಸರಾಂತ ಅಭರಣ ಮಳಿಗೆಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದು ವಿವರಿಸಿದರು.

ಗ್ರಾಹಕರ ಅಭಿರುಚಿ ಮತ್ತು ಬಜೆಟ್ ಗೆ ಅನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು‌ ನಗರದ ಜನತೆಗೆ ದೊರೆಯಲಿವೆ. ಈ ಪ್ರದರ್ಶನ ಕೇವಲ 3 ದಿನಗಳ ಕಾಲ ನಡೆಯಲಿದ್ದು, ಗ್ರಾಹಕರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ‌ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos