ಬಯಲಾಟದ ಸಂಭ್ರಮ

ಬಯಲಾಟದ ಸಂಭ್ರಮ

ಚಿಕ್ಕೋಡಿ, ಫೆ. 17: ರಾಯಬಾಗ ತಾಲೂಕಿನ ಕಟಕಭಾವಿ ಗ್ರಾಮದ ದರೀದೇವರ ಮತ್ತು ಜಕ್ಕಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಶ್ರೀ ಬಸವೇಶ್ವರ ಕಲಾ ಪೋಷಕ ಸಂಘ ಮಂಟೂರ ಇವರುಗಳ ಆಯೋಜಿಸಿದ “ಬಯಲಾಟ ಸಂಭ್ರಮದ ಉಪನ್ಯಾಸಕರಾಗಿ ಮಾತನಾಡಿದ ಸಾಹಿತಿ ಹಾಗೂ ಪ್ರಾದ್ಯಾಪಕರಾದ ಟಿ.ಎಸ್.ವಂಟಗೂಡೆ ಇತ್ತಿಚಿನ ದಿನಮಾನಗಳಲ್ಲಿ ಬಯಲಾಟ ನಾಟಕ ಹಾಗೂ ಸಣ್ಣಾಟಕ ಇವುಗಳು ಸಂಪೂರ್ಣವಾಗಿ ಮರಿಚ್ಚಿಕೆ ಯಾಗುತ್ತಿದೆ ಇವುಗಳಿ ಮತ್ತೆ ಜೀವ ತುಂಬುವುದಕ್ಕೆ ಈ ಗ್ರಾಮದ ಹಿರಿಯರು ಹಾಗೂ ಯುವಕರು ಸಜ್ಜಾಗಿದ್ದಾರೆ ಬೈಲಾಟಕ್ಕೆ 150ವರ್ಷಗಳ ಇತಿಹಾಸವಿದೆ  ಬಯಲು ಪ್ರದೇಶದಲ್ಲಿ ನಡೆಯುವ ಬೈಲಾಟವು ರಂಗಮಟ್ಟಪ, ವೇಷಭೂಷಣದಲ್ಲಿ, ವಿಶೇಷತೆಗಳನ್ನು  ಹೂಂದಿದೆ, ಕಲಾವಿದರಲ್ಲಿಯ ಹಾವ ಭಾವ, ಹಾಸ್ಯ, ರೋಷ, ಸಂಗೀತ ಪ್ರೇಕ್ಷಕರಲ್ಲಿ ಮನೋರಂಜನೆ ನೀಡುತ್ತದೆ ನೂಂದ ಮನಸ್ಸುಗಳಿಗೆ ಆನಂದವನ್ನು ಉಂಟು ಮಾಡತಕ್ಕಂತಹ ಶಕ್ತಿ ಸಂಗೀತ ಮತ್ತು ಸಾಹಿತ್ಯಕ್ಕಿದೆ ಇವೆರಡನ್ನು ಕರಕಾಮಲಕ ಮಾಡಿಕೂಂಡವರು ಯಾರು ಇದ್ದರೆ ಅದು ಬೈಲಾಟ ಕಲಾವಿದರು ಎಂದರು.

ರಾಯಬಾಗ ತಾಲೂಕಿನ ಕಟಕಭಾವಿ ಗ್ರಾಮದ ದರೀದೇವರ ಮತ್ತು ಜಕ್ಕಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಶ್ರೀ ಬಸವೇಶ್ವರ ಕಲಾ ಪೋಷಕ ಸಂಘ ಮಂಟೂರ ಇವರುಗಳ ಆಯೋಜಿಸಿದ “ಬಯಲಾಟ ಸಂಭ್ರಮಕ್ಕೆ ಉದ್ಘಾಟನೆಯನ್ನು  ಗುರುಸಿದ್ಧ ಮಹಾಸ್ವಾಮಿಗಳು ವಿರಕ್ತಮಠ ಭೆಂಡವಾಡದ ಹಾಗೂ ಅಭಿನವ ಧರೇಶ್ವರ ಸ್ವಾಮಿಗಳು,ಕಟಕಭಾವಿ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು.

ನಂತರ ಸಂಗ್ಯಾ ಬಾಳ್ಯಾ ನಾಟಕದ ಪ್ರಸಂಗವನ್ನು  ಭಾಷನದಲ್ಲಿಯೇ ಬೈಲಾಟ ಮಾಡಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ನಂತರ ಗಿರಿಮಲ್ಲಿಕಾರ್ಜುನ ಭಜನಾ ಸಂಘದಿಂದ ಬೈಲಾಟ ಹಾಡುಗಳ ಪ್ರದರ್ಶನ, ಲಕ್ಷ್ಮೀಬಾಯಿ ಹರಿಜನ ಇವರಿಂದ ಪ್ರಾತ್ಯಕ್ಷಿಕೆ, ರೇವಣಸಿದ್ಧೇಶ್ವರ ಜಾನಪದ ಕಲಾ ಸಂಘ ಹೂಸ ಕೋಟಿ ಇವರಿಂದ ಪಾರಿಜಾತ ವಿವಿಧ ನಾಟಕ ಪ್ರದರ್ಶನ ಜರುಗಿದವು

ಕಾರ್ಯಕ್ರಮದಲ್ಲಿ ಶಿವಲಿಂಗ ಪೂಜೀರಿ  ಸದಸ್ಯರು ಕರ್ನಾಟಕ ಬೈಲಾಟ ಅಕಾಡೆಮಿ, ಬಾಪು ತಾಶೇವಾಲೇ ಮಾಜಿ ಸದಸ್ಯರು ಬೈಲಾಟ ಅಕಾಡೆಮಿ,  ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪಾ ಪಕಾಂಡಿ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜೀವ ಬ್ಯಾಕುಡೆ, ವಕೀಲರಾದ ಪೂಜೇರಿ ಹಾಗೂ ಇತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos