ಮಾಜಿ ಗಾಲ್ಫ್ ಸ್ಯಾಂಡರ್ಸ್ ನಿಧನ

ಮಾಜಿ ಗಾಲ್ಫ್ ಸ್ಯಾಂಡರ್ಸ್ ನಿಧನ

ನ್ಯೂಯಾರ್ಕ್, ಏ. 13 : ಇಪ್ಪತು ಬಾರಿ ಪಿಜಿಎ ಟೂರ್ ವಿಜೇತ ಡೌಗ್ ಸ್ಯಾಂಡರ್ಸ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಿಜಿಎ ಟೂರ್ ವೆಬ್ ಸೈಟ್ ಪ್ರಕಾರ ‘ಪೀಕಾಕ್ ಆಫ್ ದಿ ಫೇರ್ ವೆಸ್’ ಎಂಬ ಅಡ್ಡ ಹೆಸರು ಗಳಿಸಿದ್ದ ಸ್ಯಾಂಡರ್ಸ್, ವಯೋ ಸಹಜ ಕಾರಣಗಳಿಂದಾಗಿ ಹ್ಯೂಸ್ಟನ್ ನಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
20 ಬಾರಿ ಪಿಜಿಎ ಟೂರ್ ಕಿರೀಟ ಗೆಲ್ಲುವುದರ ಜತೆಗೆ ಸ್ಯಾಂಡರ್ಸ್, ಪ್ರಮುಖ ಚಾಂಪಿಯನ್ ಷಿಪ್ ಗಳಾದ 1959ರ ಪಿಜಿಎ ಚಾಂಪಿಯನ್ ಷಿಪ್, 1961ರ ಯುಎಸ್ ಓಪನ್ ಮತ್ತು 1966 ಹಾಗೂ 1970ರ ಓಪನ್ ಚಾಂಪಿಯನ್ ಷಿಪ್ ಗಳಲ್ಲಿ ನಾಲ್ಕು ದ್ವಿತೀಯ ಸ್ಥಾನ ಪಡೆದಿರುವುದು ಸೇರಿದಂತೆ 20 ಸಲ ರನ್ನರ್ ಅಪ್ ಸ್ಥಾನ ಗಳಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos