ಬಿಜೆಪಿ ಮಾಜಿ ಶಾಸಕ ನಿಧನ: ಅಂತಿಮ ದರ್ಶನ ಪಡೆದ ಬಿ ವೈ ವಿ

ಬಿಜೆಪಿ ಮಾಜಿ ಶಾಸಕ ನಿಧನ: ಅಂತಿಮ ದರ್ಶನ ಪಡೆದ ಬಿ ವೈ ವಿ

ಯಾದಗಿರಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿಯ ಮಾಜಿ ಶಾಸಕ ವೆಂಕರಡ್ಡಿ ಮುದ್ನಾಳ ಅವರು ಬೆಂಗಳೂರು ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಮಂಗಳವಾರ ನಿಧನವಾಗಿದ್ದು ಇಂದು  (ಬುಧವಾರ ಸೆ. 18) ರಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕಲಬುರ್ಗಿಗೆ ಭೇಟಿ ನೀಡಿ ಮಾಜಿ ಶಾಸಕರ ಅಂತಿಮ ದರ್ಶನ ಪಡೆದಿದ್ದಾರೆ.

ಯಾದಗಿರಿಯ ಮುದ್ನಾಳವರ ಗೃಹ ಕಚೇರಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಏರ್ಪಡಿಸಲಾಗಿದ್ದ ಮಂಟಪಕ್ಕೆ ಬಂದು ಅಂತಿಮ ದರ್ಶನ ಪಡೆದ ಅವರು, ಮಾಜಿ ಶಾಸಕರ  ಪುತ್ರ ಮಹೇಶ ರಡ್ಡಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೆಂಕರಡ್ಡಿ ಮುದ್ನಾಳ ಅವರು ನಮ್ಮ ತಂದೆಯವರ ಮಾಜಿ ಸಿ ಎಂ ಯಡಿಯೂರಪ್ಪನವರ ಆಪ್ತರಾಗಿದ್ದು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮತಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವರು ಇಂತಹ ನಿಷ್ಠಾವಂತ ಹಿರಿಯ ಮುತ್ಸದ್ದಿ ವ್ಯಕ್ತಿಗಳನ್ನು ಕಳೆದುಕೊಂಡ ಪಕ್ಷಕ್ಕೆ ಹಾಗೂ ಕ್ಷೇತ್ರದ  ಅಪಾರ ಅಭಿಮಾನಿಬಳಗದವರಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ್ ಮತ್ತಿಮೂಢ ಮಾಜಿ ಸಚಿವ ರಾಜೂಗೌಡ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ, ಡಾ ಅವಿನಾಶ್ ಜಾಧವ, ಅಮರನಾಥ ಪಾಟೀಲ, ನಿತಿನ್ ಗುತ್ತೇದಾರ ಇನ್ನೂ ಅನೇಕರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos