ಚಿಣ್ಣರ ಸರ್ವಾಂಗೀಣ ಅಭಿವೃದ್ಧಿ ಯಲ್ಲಿ ಯುರೋ ಕಿಡ್ಸ್ ಶಾಲೆ

 ಚಿಣ್ಣರ ಸರ್ವಾಂಗೀಣ ಅಭಿವೃದ್ಧಿ ಯಲ್ಲಿ ಯುರೋ ಕಿಡ್ಸ್ ಶಾಲೆ

ಪೀಣ್ಯ ದಾಸರಹಳ್ಳಿ, ಸೆ. 21: ಅದೊಂದು ಶಾಲೆ, ಒಳಗೆ ಪ್ರವೇಶಿಸುತ್ತಿದ್ದಂತೆ ಚಿಣ್ಣರ ಲೋಕವೇ ಇತ್ತು. ಅದು ಅವರಿಗೆ ಸ್ವರ್ಗಲೋಕ, ಅಲ್ಲಿ ವಿವಿಧ ಬಗೆಯ ಆಟ ಪಾಠಗಳ ಮೂಲಕ ಚಿಣ್ಣರ ಮನಸ್ಸಿಗೆ ಮುದ ನೀಡುವಂತೆ ಹೇಳಿಕೊಡುವ ಶಿಕ್ಷಕಿಯರು, ಶಾಲೆಯ ಮುಖ್ಯಸ್ಥರ ಕಾಳಜಿ ಚಿಣ್ಣರ ಕಲರವ, ಮಕ್ಕಳ ಆಟಗಳನ್ನು ಸಂತೋಷದಿಂದ ವೀಕ್ಷಿಸುತ್ತಿರುವ ಪೋಷಕರು ಇವೆಲ್ಲವೂ ಕಂಡುಬಂದಿದ್ದು, ರುಕ್ಮಿಣಿ ನಗರದ ಯುರೋ ಕಿಡ್ಸ್ ಶಾಲೆಯಲ್ಲಿ.

ಕಣ್ಣು ಮೆದುಳು ಮತ್ತು ಕೈಗಳಿಂದ ಅಕ್ಷರ ಗುರುತಿಸುವಿಕೆ ಮತ್ತು ಬರೆಯುವುದು, ಬಣ್ಣಗಳ ಗುರುತಿಸುವುದು, ಗಣಿತ ಶಾಸ್ತ್ರದ ಆಟ, ಅಡುಗೆ ಮನೆ ಉಪಕರಣಗಳಿಂದ ಜೀವನ ಕೌಶಲ್ಯ ಅಭಿವೃದ್ಧಿ, ದವಸ ಧಾನ್ಯಗಳಿಂದ ಅಕ್ಷರ ಕಲಿಕೆ, ನೆರಳು ಗುರುತಿಸುವಿಕೆ, ಶಬ್ದಗಳ ರಚನೆ, ಪೋಷಕರ ಸಂಬಂಧ ಬೆಸುಗೆ ಇನ್ನು ಮುಂತಾದ ಆಟ-ಪಾಠ ಗಳಿಂದ ಮಕ್ಕಳಿಗೆ ಜ್ಞಾನಾರ್ಜನೆ ತುಂಬುವ ಆಟಗಳನ್ನು ಹೇಳಿಕೊಡಲಾಗುತ್ತದೆ.

ಶಾಲೆಯ ನಿರ್ದೇಶಕ ಸೋಮನಾಥ್ ಹಾವರಗಿ ಮಾತನಾಡಿ,”ಮಗುವಿನ ಸರ್ವಾಂಗೀಣ ಅಭಿವೃದ್ಧಿ( ಬೌದ್ಧಿಕ, ದೈಹಿಕ ಹಾಗೂ ಸಾಮಾಜಿಕ) ಗಳಿಗೆ ಒತ್ತು ನೀಡಿ, ಟಿವಿ ಮೊಬೈಲ್ ನಿಂದ ದೂರ ಇದ್ದು, ಸಂಬಂಧಗಳ ಬೆಸುಗೆಯನ್ನು ಏರ್ಪಡಿಸುವುದು” ನಮ್ಮ ಶಾಲೆಯ ಮುಖ್ಯ ಉದ್ದೇಶ ಎಂದರು.

ಕೇಂದ್ರದ ಮುಖ್ಯಸ್ಥರಾದ ಪುಷ್ಪ ಹಾವರಗಿ ಮಾತನಾಡಿ, ” ನೆನಪಿನ ಶಕ್ತಿ ವೃದ್ಧಿಸಲು ಕೈಗಳಿಂದ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಉದಾ: ಬಳೆಗಳು, ಸ್ಪೂನ್, ಪ್ಲೇಟ್ಸ್ ಗಳಿಂದ ವಿವಿಧ ಬಗೆಯ ಆಟ-ಪಾಠಗಳನ್ನು ಹೇಳಿಕೊಡಲಾಗುತ್ತದೆ” ಎಂದರು.

ಪೋಷಕ ದೇವರಾಜು ಮಾತನಾಡಿ, ” ಇಲ್ಲಿ ಒಳ್ಳೆಯ ವಾತಾವರಣವಿದೆ. ಇದು ಒಳ್ಳೆಯ ಶಾಲೆ ಮಕ್ಕಳಿಗೆ ಕಲಿಯಲು ತುಂಬಾ ಪ್ರೋತ್ಸಾಹ ನೀಡುತ್ತಾರೆ. ಮಕ್ಕಳ ನೆನಪಿನ ಶಕ್ತಿ ಹಾಗೂ ಸದಾ ಚಟುವಟಿಕೆಯಿಂದ ಇರಲು ತುಂಬಾ ಆಟ- ಪಾಠಗಳಿವೆ” ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos