ಇಂಜಿನಿಯರ್ ವಿದ್ಯಾರ್ಥಿಗಳಿಂದ ಅಸಾಧಾರಣ ಡಿಜಿಟಲ್ ಗಡಿಯಾರ ಆವಿಷ್ಕಾರ

ಇಂಜಿನಿಯರ್ ವಿದ್ಯಾರ್ಥಿಗಳಿಂದ ಅಸಾಧಾರಣ ಡಿಜಿಟಲ್ ಗಡಿಯಾರ ಆವಿಷ್ಕಾರ

ಬೆಂಗಳುರು, ಜು.02: ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಿಪಿಎಸ್ ಸಂಕೇತಗಳನ್ನು ಆಧರಿಸಿದ ಅಸಾಧಾರಣ ಡಿಜಿಟಲ್ ಅನಲಾಗ್ ಗಡಿಯಾರವನ್ನು ಆವಿಷ್ಕಾರಗೊಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಎಲೆಕ್ಟ್ರಾನಿಕ್ ಮತ್ತು ಸಂಪರ್ಕ ವಿಭಾಗದ ಡಾ.ದಿನೇಶ್ ಅನ್ವೇಕರ್ ಮಾತನಾಡಿ ಈ ಗಡಿಯಾರ ವೈಶಿಷ್ಟ್ಯ ಎಂದರೆ ಉಪಗ್ರಹದ ಜಿಪಿಎಸ್ ಮೂಲಕ ಸಮಯದ ಸಂಕೇತವನ್ನು ಪಡೆಯಲಾಗುವುದು. ಡಿಜಿಟಲ್ ತಾಂತ್ರಿಕ ವ್ಯವಸ್ಥೆ ಮೂಲಕ ಸಿದ್ದಪಡಿಸಿರುವ ಈ ಗಡಿಯಾರ ನಿಖರ ಸಮಯ ತೋರಿಸುತ್ತದೆ. ಸೆಕೆಂಡ್ ನಿಮಿಷ ಮತ್ತು ಗಂಟೆಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.
ಎಲ್ಇಡಿ ತಂತ್ರಜ್ಞಾನದ ಬೆಳಕಿನ ಮೂಲಕ ನಿಖರ ಸಮಯ ತೋರಿಸುವ ಈ ಗಡಿಯಾರ ಇತರೆ ಸಾಮಾನ್ಯ ಗಡಿಯಾರಗಳಂತೆ ಇದರಲ್ಲಿರುವ ಮುಳ್ಳುಗಳು ಚಲಿಸುವುದಿಲ್ಲ. ವಿಶೇಷವೆಂದರೆ ವ್ಯಕ್ತಿಗತವಾಗಿ ಸಮಯವನ್ನು ಸರಿಪಡಿಸುವ ಪ್ರಮೇಯ ಬರುವುದಿಲ್ಲ ಎಂದರು.

ಗಡಿಯಾರದ ಸ್ವೀಚ್ ಒತ್ತಿದರೆ ಕಾಂಪೆಕ್ಟ್ ಅಂಟೇನಾದಿಂದ ಕನಿಷ್ಠ ಮೂರು ಉಪಗ್ರಹಗಳಿಂದ ಜಿಪಿಎಸ್ ಸಂಕೇತವನ್ನು ಇದು ಸ್ವೀಕರಿಸುತ್ತದೆ ಜಿಎಂಟಿ ಆಧಾರದ ಮೇಲೆ ಭಾರತೀಯ ಕಾಲಮಾನ ಐಎಸ್ಟಿ ನ್ನು ಈ ಗಡಿಯಾರ ತೋರಿಸುತ್ತದೆ. ಈ ಗಡಿಯಾರ ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಿದ್ದು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ನಿಖರ ಸಮಯ ತಿಳಿಯಲು ಅಳವಡಿಸಬಹುದು ಎಂದರು.
ಪ್ರತಿ 60 ನಿಮಿಷಕ್ಕೊಮ್ಮೆ ಸರಿಯಾಗಿ ಸಮಯ ಇಷ್ಟು ಗಂಟೆಯಾಗಿದೆ ಎಂದು ಸ್ಪಷ್ಟವಾಗಿ ಧ್ವನಿ ಹೊಮ್ಮುವುದು ಇದರ ಮತ್ತೊಂದು ವಿಶೇಷ, ಇದರ ನಿರ್ವಹಣೆ ದುಬಾರಿಯಲ್ಲ ಎಂದು ಮಾಹಿತಿ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos