ಎನ್ಕೌಂಟರ್ ತನಿಖೆಗೆ ಎಸ್ಐಟಿ ರಚನೆ

ಎನ್ಕೌಂಟರ್ ತನಿಖೆಗೆ ಎಸ್ಐಟಿ ರಚನೆ

ಹೈದರಾಬಾದ್, ಡಿ. 09 : ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದ ಪ್ರಕರಣದ ತನಿಖೆಗೆ ತೆಲಂಗಾಣ ಸರ್ಕಾರ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಿದೆ.
ಎಸ್ಐಟಿ ರಚನೆ ಸಂಬಂಧ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ರಚಾಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ. ಭಗವತಿ ನೇತೃತ್ವದಲ್ಲಿ ಎಂಟು ಸದಸ್ಯರು ಎಸ್ಐಟಿ ರಚಿಸಲಾಗಿದೆ. ಗುಂಡಿನ ಚಕಮಕಿ ಮತ್ತು ನಾಲ್ವರು ಆರೋಪಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ಇತರ ಎಲ್ಲಾ ವಿಷಯಗಳ ಬಗ್ಗೆ ಸುಪ್ರೀಂಕೋರ್ಟ್ ಮಾರ್ಗಸೂಚಿಗಳಂತೆ ತಕ್ಷಣ ತನಿಖೆ ಆರಂಭಿಸಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎನ್ಐಟಿ ತನಿಖೆ ಪೂರ್ಣಗೊಳಿಸಿ ಸಕ್ಷಮ ನ್ಯಾಯಾಲಯದ ತನ್ನ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಹೈದರಾಬಾದ್ ಹೊರವಲಯದ ಶಾದ್ಬಾದ್ನ ಚಿಟಾನ್ಪಲ್ಲಿ ಸೇತುವೆ ಬಳಿ ಪೊಲೀಸ್ ಎನ್ಕೌಂಟರ್ಗಳಲ್ಲಿ ಪಶು ವೈದ್ಯೆ ಅತ್ಯಾಚಾರಿ ಮತ್ತು ಹಂತಕರಾದ ಮೊಹಮದ್ ಆರೀಫ್, ಶಿವ, ಚೆನ್ನಕೇಶುವುಲು ಮತ್ತು ನವೀನ್ ಹತರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos