ಎನ್ಕೌಂಟರ್, 3 ಉಗ್ರರು ಉಡೀಸ್..!

ಎನ್ಕೌಂಟರ್, 3 ಉಗ್ರರು ಉಡೀಸ್..!

ಶ್ರೀನಗರ, ಜ. 31: ಜಮ್ಮು ಮತ್ತು ಶ್ರೀನಗರ ಹೈವೆಯಲ್ಲಿ ಇಂದು  ಮುಂಜಾನೆ ವೇಳೆ 3 ಉಗ್ರರನ್ನ ಸೇನಾ ಪಡೆ ಹೊಡೆದುರುಳಿಸಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದ ಎನ್ಕೌಂಟರ್ನಲ್ಲಿ, ಭದ್ರತಾ ಪಡೆ ಉಗ್ರರನ್ನ ಸೆದೆಬಡಿದಿದೆ.

ಬೆಳಗ್ಗೆ 5 ಗಂಟೆಗೆ ನಗ್ರೋಟಾದ ಬನ್ ಏರಿಯಾ ಬಳಿಯಿರುವ ಟೋಲ್ ಪ್ಲಾಜಾ ಬಳಿ ಭದ್ರತಾ ಸಿಬ್ಬಂದಿ ಟ್ರಕ್ವೊಂದನ್ನ ತಡೆದಿದ್ದರು. ಈ ವೇಳೆ ಅದರಲ್ಲಿದ್ದ ಉಗ್ರರ ಗುಂಪು, ಭದ್ರತಾ ಪಡೆ ಮೇಲೆ ಫೈರಿಂಗ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಕೂಡ, ಉಗ್ರರತ್ತ ಫೈರಿಂಗ್ ಮಾಡಿದೆ. ಈ ಎನ್ಕೌಂಟರ್ನಲ್ಲಿ 3 ಉಗ್ರರು ಫಿನಿಶ್ ಆಗಿದ್ದು, ಒಬ್ಬ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ. ಟ್ರಕ್ನಲ್ಲಿ ಸುಮಾರು 4- 5 ಜನ ಉಗ್ರರಿದದ್ದರು ಎಂದು ಹೇಳಲಾಗುತ್ತಿದ್ದು, ಉಳಿದವರು ಅಕ್ಕಪಕ್ಕದ ಪ್ರದೇಶದಲ್ಲಿ ಅಡಗಿರುವ ಶಂಕೆ ಇದೆ. ಹೀಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos