ತುರ್ತು ಕರೆ ಸಂಖ್ಯೆಯ ಅರಿವು ಕಾರ್ಯಕ್ರಮ

  • In State
  • August 11, 2021
  • 187 Views
ತುರ್ತು ಕರೆ ಸಂಖ್ಯೆಯ ಅರಿವು ಕಾರ್ಯಕ್ರಮ

ತುಮಕೂರು: ಜಿಲ್ಲಾ ಪೊಲೀಸ್, ವೈ.ಎನ್. ಹೊಸಕೋಟೆ ಪೊಲೀಸ್ ಇಲಾಖೆ ವತಿಯಿಂದ, ಹೆಲ್ಪ್ ಸೊಸೈಟಿ ಸಹಕಾರದೊಂದಿಗೆ 112 ತುರ್ತು ಕರೆ ಸಂಖ್ಯೆಯ ಕರ ಪತ್ರವನ್ನು ಬುಧವಾರ ಆಟೋ ರಿಕ್ಷಾಗಳ ಹಿಂಭಾಗದಲ್ಲಿ 112 ಪೋಸ್ಟರ್ ಅಳವಡಿಸುವುದರ ಮೂಲಕ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ರಾಹುಲ್ ಕುಮಾರ್ ಚಾಲನೆ ನೀಡಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಅವರು ಈಗ ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಎಂಬ ತುರ್ತು ಸ್ಪಂದನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪೊಲೀಸ್, ಅಗ್ನಿಶಾಮಕ, ವಿಪತ್ತು ಸೇವೆಗಳಿಂದ ತ್ವರಿತ ಸಹಾಯ ಪಡೆಯುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು, ಹೆಚ್ಚು ಪ್ರಚಾರ ಪಡೆಯಲು ಈ ಪೋಸ್ಟರ್ ಅಳವಡಿಸುವುದರಿಂದ ಸಾರ್ವಜನಿಕರಿಗೆ ಮಾಹಿತಿ ರವಾನೆಯಾಗಿ ಹೆಚ್ಚು ಉಪಯುಕ್ತವಾಗುವುದು ಎಂದು ಹೇಳಿದರು.

ಸಾರ್ವಜನಿಕ ಮತ್ತು ಪೊಲೀಸ್ ಇಲಾಖೆಯ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದು, ಯಾವುದೇ ಅಪರಾಧ ಕೃತ್ಯಗಳಾದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ವೈ.ಎನ್. ಹೊಸಕೋಟೆಯ ಪಿ.ಎಸ್.ಐ. ಭಾರತಿ ತಿಳಿಸಿದ್ದಾರೆ.

ಈ ವೇಳೆ ಮಧುಗಿರಿ ಡಿ. ವೈ ಎಸ್. ಪಿ. ರಾಮಕೃಷ್ಣ, ಸಿ. ಐ. ಕಾಂತರೆಡ್ಡಿ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ರೋಟರಿ ಕಾರ್ಯದರ್ಶಿ ಸತ್ಯ ಲೋಕೇಶ್, ಪೊಲೀಸ್ ಸಿಬ್ಬಂದಿ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳದ ಭೀಮಾ ರಾಜ್, ಸಾಯಿಕುಮಾರ್ ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos