ಜೀವಂತವಿಲ್ಲದ ಚುನಾವಣ ಆಯೋಗ

ಜೀವಂತವಿಲ್ಲದ ಚುನಾವಣ ಆಯೋಗ

ಬೆಂಗಳೂರು,  ಡಿ. 2: ದೇಶದಲ್ಲಿ ಚುನಾವಣಾ ಆಯೋಗ ಜೀವಂತ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಿದ್ದರೂ ಕಣ್ಮುಚ್ಚಿ ಕೂತಿದೆ ಎಂದು ಪ್ರಚಾರ ಸವಿತಿ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೆರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತದಾರರನ್ನು ದಾರಿ ತಪ್ಪಿಸಲು ಹಣ ಹಂಚಿಕೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದ ಜನರ ಓಲೈಕೆಗೆ ಹೇಳಿಕೆಗಳ ಮೇಲೆ ಹೇಳಿಕೆ ನೀಡಿ, ಕೇವಲ ಅನರ್ಹ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಮಾತ್ರವೇಹಣ ಬಿಡುಗಡೆ ಮಾಡಿದ್ದಾರೆಂದರು. ಗೋಡೆ ಬರಹದಲ್ಲಷ್ಟೇ ಬಿಜೆಪಿ ಗೆಲವು. ಕಾಂಗ್ರೆಸ್ ಪರ ಅಲೆ ಬೀಸುತ್ತಿದೆ ಎಂದರು.

ಯಡಿಯೂರಪ್ಪ ತಿರುಕನ ಕನಸುಕಾಣುತ್ತಿದ್ದಾರೆ. ಹದಿನೈದು ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿರುವ ಯಡಿಯೂರಪ್ಪ ಗೆಲುವಿನ ಅಂತರವನ್ನಷ್ಟೆ ಹೇಳಿದ್ದಾರೆ.ವಾಮ ಮಾರ್ಗದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಹದಿನೇಳು ಜನ ಆಪರೇಷನ್ ಮಾಡಿದ್ದು ಯಾವ ಕಾರಣಕ್ಕೆ ಹೇಳಿ ಅನಂತಕುಮಾರ ಹೆಗ್ಗಡೆ ಅವರೆ ಎಂದು ಸವಾಲು ಹಾಕಿದರು.ಭ್ರಷ್ಟರನ್ನು ರಕ್ಷಿಸಲು ಬಿಜೆಪಿ ಅಧಿಕಾರಕ್ಕೆ ಬಂದಿದ್ದಾ ಎಂದು ತರಾಟೆಗೆ ತೆಗೆದುಕೊಂಡರು.

ಡಿಕೆ ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿರುವುದನ್ನು ಸಹಿಸದ ಬಿಜೆಪಿ ಆಡಳಿರ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಐಟಿ ಇಲಾಖೆಯಿಂದ 30 ನೋಟಿಸ್ ಗಳನ್ನು ಜಾರಿ ಮಾಡಿರುವುದೇ ಸಾಕ್ಷಿಯೆಂದರು.

ನಿರುದ್ಯೋಗ, ಈರುಳ್ಳಿ ಬೆಲೆ ಏರಿಕೆ ಜಿಡಿಪಿ, ವಿದೇಶಿ ಮೌಲ್ಯ ಕುಸಿತ ಇವೆಲ್ಲ ಅಚ್ಚೇ ದಿನಗಳ ಎಂದರು.ಬಿಜೆಪಿ ಮುಕ್ತ ಭಾರತ ಮಾಡಲು ಹೊರಟಿರುವ ಜನರ ನಾಡಿ ಮಾಡಿ ಮಿಡಿತ ಅರಿತಿರುವ ಬಿಜೆಪಿ ಲೂಟಿ ಮಾಡಲು ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಹದಿನೈದು ಕ್ಷೇತ್ರದಲ್ಲಿ ಬಿಜೆಪಿಯ ಅನರ್ಹ ಶಾಸಕರು ಸೋಲು ಖಚಿತವೆಂದರು.

ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಧ್ವಜ ಹಾರಿಸಲಿದೆ ಎಂದು ಹೇಳಿದ ಉಗ್ರಪ್ಪ ಯಾವ ಕ್ಷೇತ್ರದಲ್ಲೂ ಮೈತ್ರಿ ಇಲ್ಲವೆಂದರು.ಬಾAಬೆ ಹಣ ಬಳಸಿ ವಿಜಯನಗರರದಲ್ಲಿ ಉಂಗುರ ಹೊಸಕೋಟೆಯಲ್ಲಿ ಹಣ ಹಂಚಿಕೆ ತಡೆಯಲು ದೂರು ನೀಡಿರುವುದಾಗಿ ಹೇಳಿದರು.9 ರ ನಂತರ ರಾಜ್ಯದ ಮಹತ್ತರ ರಾಜಕೀಯ ಬದಲಾವಣೆ ಆಗಲಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್. ಮೋಹನ್ ಕೊಂಡಜ್ಜಿ ಹಾಜರಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos