ಹುಬ್ಬಳ್ಳಿಗೆ ಈಜಿಪ್ತ್ ಉಳ್ಳಾಗಡ್ಡಿ

ಹುಬ್ಬಳ್ಳಿಗೆ ಈಜಿಪ್ತ್ ಉಳ್ಳಾಗಡ್ಡಿ

ಹುಬ್ಬಳ್ಳಿ, ಡಿ. 6: ಉಳ್ಳಾಗಡ್ಡಿ ಕಡಿಮೆಯಾಗಿ ದರ ಏರುಮುಖವಾಗಿರುವ ಸಂದರ್ಭದಲ್ಲೇ ಈಜಿಪ್ತ್ ಉಳ್ಳಾಗಡ್ಡಿ ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.

ಸ್ಥಳೀಯ ಈರುಳ್ಳಿ ದರ ಏರುತ್ತಿರುವುದರಿಂದ ಬೆಲೆ ನಿಯಂತ್ರಣ ಉದ್ದೇಶದಿಂದ ಹೊರದೇಶದಿಂದ ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ಪ್ರಯತ್ನ ನಡೆಸಿದೆ. ಆದರೆ, ಬೇರೆ ದೇಶದ ಉತ್ಪನ್ನವೂ ಸಾಗಾಟ ವೆಚ್ಚ ಸೇರಿ ಪ್ರತಿ ಕೆಜಿಗೆ 100 ರೂ.ಗೂ ಹೆಚ್ಚಾಗಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಈಜಿಪ್ತ್ ಉಳ್ಳಾಗಡ್ಡಿ ಒಂದಿಷ್ಟು ತೇವಾಂಶದಿಂದ ಕೂಡಿದ್ದು, ಹೆಚ್ಚು ದಿನ ಕಾದಿಡಲು ಸಾಧ್ಯವಿಲ್ಲ. ಬಹು ಬೇಗ ವಿಲೇವಾರಿ ಮಾಡುವಂತಹ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ಮೂಲಕ ಎರಡು ಲೋಡ್ ಈಜಿಪ್ತ್ ಈರುಳ್ಳಿ ತರಿಸಲಾಗಿತ್ತು. ಇನ್ನೆರಡು ದಿನದಲ್ಲಿ ಮತ್ತಷ್ಟು ಲೋಡ್ ಬರಲಿದೆ ಎಂದು ಉಳ್ಳಾಗಡ್ಡಿ ವರ್ತಕ ಸಲೀಂ ಬ್ಯಾಹಟ್ಟಿ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos