20 ಹಸಿಮೆಣಸು ತಿನ್ನಲು ಪಣತೊಟ್ಟ ತನಿಷಾ, ವರ್ತೂರು!

20 ಹಸಿಮೆಣಸು ತಿನ್ನಲು ಪಣತೊಟ್ಟ ತನಿಷಾ, ವರ್ತೂರು!

ಬೆಂಗಳೂರು: ಕನ್ನಡ ಬಿಗ್‌ ಬಾಸ್‌ ಎರಡು ತಿಂಗಳು ಮುಗಿತ್ತಾ ಬಂದಿದೆ. ಇದರಿಂದ ಶೋ ಕೂಡಾ ಕಠಿಣವಾಗುತ್ತಿದೆ. ಬಿಗ್ ಬಾಸ್ ಕಂಟೆಸ್ಟಂಟ್​ಗಳಿಗೆ ಸ್ಪರ್ಧೆ ಕಠಿಣ ಆಗುತ್ತಲೇ ಇದೆ. ಹೊಸ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಈ ವಾರ ಎರಡು ತಂಡ ಮಾಡಲಾಗಿದೆ. ಎದುರಾಳಿ ತಂಡಕ್ಕೆ ಕಠಿಣ ಟಾಸ್ಕ್ ನೀಡಬೇಕು. ಅಂತೆಯೇ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರ ತಲೆ ಕೂದಲನ್ನು ಬೋಳಿಸಲಾಗಿದೆ. ಈಗ ವರ್ತೂರು ಸಂತೋಷ್ ಹಾಗೂ ತನಿಷಾಗೆ ತಲಾ 20 ಹಸಿಮೆಣಸು ತಿನ್ನಬೇಕು ಎನ್ನುವ ಚಾಲೆಂಜ್ ನೀಡಲಾಗಿದೆ. ಈ ಚಾಲೆಂಜ್​ನ ಇವರು ಸ್ವೀಕರಿಸಿದ್ದಾರೆ. ಹಸಿಮೆಣಸಿನ ಕಾಯಿ ತಿನ್ನುವಾಗ ಕಣ್ಣಲ್ಲಿ ನೀರು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos