ನಕಲಿ ಪಡಿತರ ಪತ್ತೆಗಾಗಿ ಇ-ಕೆವೈಸಿ

ನಕಲಿ ಪಡಿತರ ಪತ್ತೆಗಾಗಿ ಇ-ಕೆವೈಸಿ

ಪಾವಗಡ, ಡಿ. 06: ನೈಜ ಪಡಿತರ ಫಲಾನುಭವಿಗಳ ಪತ್ತೆಗೆ ಹಾಗೂ ನಕಲಿ ಪಡಿತರದಾರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿಯನ್ನು ಜಾರಿಗೊಳಿಸಿದೆ. ಆದ್ದರಿಂದ ಹೆಬ್ಬಟ್ಟಿನ ಗುರುತು ನೀಡಬೇಕಾಗಿದ್ದು, ಅಪ್‌ಲೋಡ್‌ ಮಾಡುವ ನಿಟ್ಟಿನಲ್ಲಿ ಸದಸ್ಯರೆಲ್ಲರೂ ‘ಅನ್ನಭಾಗ್ಯ’ ಕೇಂದ್ರಗಳಿಗೆ ತೆರಳುವಂತೆ ಪಾವಗಡ ತಾಲೂಕು ಆಹಾರ ಇಲಾಖೆ ಗಡುವು ನೀಡಿದೆ.

ಇ-ಕೆವೈಸಿ ಸಂಗ್ರಹಣಾ ಕರ‍್ಯವನ್ನು ತಿಂಗಳ ಮೊದಲ 10 ದಿನಗಳ ಅಂದರೆ ಡಿಸೆಂಬರ್ 1 ರಿಂದ 10 ರವರೆಗೆ ಮತ್ತು  2020 ರ  ಜನವರಿ1 ರಿಂದ ಜನವರಿ10 ವರೆಗೆ ಮಾಡಲಾಗುತ್ತದೆ. ಈ 10 ದಿನಗಳಲ್ಲಿ ಆನ್ ಲೈನ್ ಮೂಲಕ ಪಡಿತರ ವಿತರಣೆ ಇರುವುದಿಲ್ಲ ಇ-ಕೆವೈಸಿ ಮಾಡದೆ ಇರುವ ಫಲಾನುಭವಿಗಳಿಗೆ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಜಾತಿ ಪ್ರಮಾಣಪತ್ರ ಸಲ್ಲಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಡಿತರ ಚೀಟಿಯ ಫಲಾನುಭವಿಗಳು ತಮ್ಮ ಪಡಿತರ ಚೀಟಿಯ ಯಾವುದಾದರೂ ಒಬ್ಬ ಸದಸ್ಯರ ಜಾತಿ ಪ್ರಮಾಣ ಪತ್ರವನ್ನು ಇ-ಕೆವೈಸಿ ಮಾಡುವ ಸಂರ‍್ಭದಲ್ಲಿ ಮಾಹಿತಿ ನೀಡಬೇಕು. ಅನಿಲ ಸಂರ‍್ಕ ಹೊಂದಿದರೆ, ಅಂತಹ ಪಡಿತರ ಚೀಟಿದಾರರ ಯಾವ ಯೋಜನೆಯ ಫಲಾನುಭವಿಗಳು ಅಥವಾ ನೇರವಾಗಿ ಖರೀದಿ ಮಾಡಿರುವ ಕುರಿತು ಮಾಹಿತಿ ನೀಡಲು ಸೂಚಿಸಲಾಗಿದೆ.

ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಫಲಾನುಭವಿಯ ಇ-ಕೆವೈಸಿ ಮಾಡುವ ಸಲುವಾಗಿ ಪ್ರತಿ ಫಲಾನುಭವಿಗೆ 5 ರೂ.ನಂತೆ ಒಂದು ಕುಟುಂಬಕ್ಕೆ ಗರಿಷ್ಠ ಮೊತ್ತ 20 ಮಾತ್ರ ಇಲಾಖೆ ವತಿಯಿಂದ ನೇರವಾಗಿ ಅಂಗಡಿಯವರಿಗೆ ಪಾವತಿಸಲಾಗುತ್ತದೆ. ಫಲಾನುಭವಿಯಿಂದ ಯಾವುದೇ ಮೊತ್ತವನ್ನು ನ್ಯಾಯಬೆಲೆ ಅಂಗಡಿಯವರು ಸಂಗ್ರಹಿಸಿದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಹಾಗೂ ಬಿಪಿಎಲ್ ಪಡಿತರ ಚೀಟಿಪಡೆಯಲ್ಲು  ಶ್ರೀಮಂತರು ಸರಕಾರಕ್ಕೆ ಸ್ವಇಚ್ಛೆಯಿಂದ ಹಿಂದುಗಿಸಬೇಕು ಬಿಪಿಎಲ್ ಪಟ್ಟಿಯಲ್ಲಿ ಬಾಡಿಗೆ ಪಡೆಯುತ್ತಿರುವ ಶ್ರೀಮಂತರು ಸರಕಾರಿ ಉದ್ಯೋಗದಲ್ಲಿರುವವರು ಹಾಗೂ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಯನ್ನು ದಿನಾಂಕ 21-12-2016 ರೊಳಗಾಗಿ ಪಡಿತರ ಚೀಟಿ ಸ್ವಯಂ ಘೋಷಿಸಿಕೊಂಡು ಪಾವಗಡ ತಾಲ್ಲೂಕು ಕಛೇರಿಯ ಆಹಾರ ಇಲಾಖೆಗೆ ಹಿಂತಿರುಗಿಸಿದರೆ ಅಂತಹವರ ವಿರುದ್ಧ ಯಾವುದೇ ಕ್ರಮ ವಿರುವುದಿಲ್ಲ.

ಇಲಾಖೆಯಿಂದಲೇ ಗುರುತಿಸಿದಾಗ ಸಿಕ್ಕಿಬಿದ್ದಲ್ಲಿ ಇಲ್ಲಿಯವರೆಗೆ ಅವರು  ವಂಚಿಸಿ ಪಡೆದಿರುವ ಪಡಿತರಕ್ಕೆ ಎ ಪಿ ಎಲ್ ದರದಲ್ಲಿ ಲೆಕ್ಕಹಾಕಿ ದಂಡ ವಿಧಿಸಲಾಗುವುದಲ್ಲದೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು . ಪಡಿತರ ಚೀಟಿ ಪಡೆದಿದ್ದಲ್ಲಿ ಕೂಡಲೇ ಹಿಂದುರುಗಿಸಿ  ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಲ್ಲಿ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಫಲಾನುಭವಿಗಳಿಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ತ್ವರಿತವಾಗಿ ನೋಂದಣಿ ಮುಗಿಯಲಿದೆ. ಬಹುತೇಕ ನ್ಯಾಯಬೆಲೆ ಅಂಗಡಿಗಳು ಲ್ಯಾಪ್​ಟಾಪ್ ಬಳಸುತ್ತಿದ್ದು, ವಿದ್ಯುತ್ ಕಡಿತದಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ಪಾವಗಡ ತಾಲ್ಲೂಕಿನ ಆಹಾರ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos