ಕೊರೋನಾ ನಿವಾರಣೆಗೆ ದುರ್ಗಾದೇವಿ ಹೋಮ

ಕೊರೋನಾ ನಿವಾರಣೆಗೆ ದುರ್ಗಾದೇವಿ ಹೋಮ

ಕೊರಟಗೆರೆ: ಜಗತ್ತಿಗೆ ಭಯದ ವಾತವರಣ ಸೃಷ್ಟಿಸಿ ಆರೋಗ್ಯಕ್ಕೆ ಕಂಟಕ ತಂದಿರುವ ಕೊರೋನಾ ಮಹಾಮಾರಿ ದುರ್ಗಾದೇವಿಯ ಶಕ್ತಿಯಿಂದ ದೂರವಾಗಿ ಭಕ್ತರಿಗೆ ಆರೋಗ್ಯ ನೀಡಲಿ ಎಂದು ದುರ್ಗಾಹೋಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಪ್ರಧಾನ ಅರ್ಚಕ ಡಾ.ಹೆಚ್.ಸಿ.ಪ್ರಸನ್ನಕುಮಾರ್ ತಿಳಿಸಿದರು.

ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀಕ್ಷೇತ್ರದ ಮಾತೆ ಕಮಲಮ್ಮನವರ ಬೃಂದಾವನದ ಆವರಣದಲ್ಲಿ ಮಹಾಲಕ್ಷ್ಮೀ ಕಮಲ ಸೇವಾ ಟ್ರಸ್ಟ್ನ ವತಿಯಿಂದ ಏರ್ಪಡಿಸಲಾಗಿದ್ದ ಲೋಕಕಲ್ಯಾಣಾರ್ಥ ದುರ್ಗಾಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊರೋನಾ ರೋಗದಿಂದ ಸಾವಿರಾರು ಭಕ್ತರಿಗೆ ದುಡಿಮೆಯಿಲ್ಲದೇ ಹಲವಾರು ರೀತಿಯ ಸಮಸ್ಯೆ ಸೃಷ್ಟಿಯಾಗಿದೆ. ಕಮಲಮ್ಮ ಬೃಂಧಾವನದ ಆವರಣದಲ್ಲಿ ಭಕ್ತರ ಬೇಡಿಕೆಯಂತೆ ವಿಜಯದಶಮಿ ಹಬ್ಬದ ದಿನ ದುರ್ಗಾಹೋಮ ನಡೆದಿದೆ. ನಮ್ಮ ಭಾರತ ದೇಶ ಕೊರೋನಾ ಮುಕ್ತವಾಗಿ ಭಕ್ತರಿಗೆ ಆರೋಗ್ಯ ನೀಡುವಂತೆ ಎಂದು ಗೊರವನಹಳ್ಳಿ ಮಹಾಲಕ್ಷ್ಮೀ ದೇವಿಗೆ ಪ್ರಾರ್ಥಿಸೋಣ ಎಂದು ಹೇಳಿದರು.

ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಕಮಲ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಶ್ರೀಲಕ್ಷ್ಮೀ

ಪ್ರಸಾದ್ ಮಾತನಾಡಿ ಗೊರವನಹಳ್ಳಿ ಪುಣ್ಯಕ್ಷೇತ್ರದಲ್ಲಿ ಕಮಲಮ್ಮನ ಬೃಂದಾವನ ಮತ್ತು ದೇವಿ ಮಹಾಲಕ್ಷ್ಮೀಎಂಬ ಎರಡು ಶಕ್ತಿ ಕೇಂದ್ರಗಳಿವೆ. ಕಮಲಮ್ಮ ಮತ್ತು ಮಹಾಲಕ್ಷ್ಮೀ ಪವಾಡದಿಂದ ಲಕ್ಷಾಂತರ ಜನ ಭಕ್ತರಿಗೆ ಒಳಿತು ಉಂಟಾಗಿದೆ. ದುರ್ಗಾದೇವಿಯ ಪವಾಡದಿಂದ ಕೊರೊನಾ ಮಹಾಮಾರಿ ದೂರವಾಗಲಿ ಎಂದು ದುರ್ಗಾಹೋಮ ನಡೆದಿದೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos