ಡ್ರಗ್ಸ್ ಕೇಸ್ : ಅರ್ಮಾನ್ ಬಂಧನ

ಡ್ರಗ್ಸ್ ಕೇಸ್ : ಅರ್ಮಾನ್ ಬಂಧನ

ಮುಂಬೈ: ಮನೆಯಲ್ಲಿ ಡ್ರಗ್ಸ್ ಪತ್ತೆಯಾದ ಬೆನ್ನಲ್ಲೇ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರನ್ನು ಎನ್’ಸಿಬಿ ಅಧಿಕಾರಿಗಳು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ನಿನ್ನೆಯಷ್ಟೇ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್ಸಿಬಿ) ದಾಳಿ ನಡೆಸಿತ್ತು. ದಾಳಿ ವೇಲೆ ಅರ್ಮಾನ್ ಕೊಹ್ಲಿ ಅವರ ನಿವಾಸದಲ್ಲಿ ಸಣ್ಣ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿತ್ತು.
ಈ ಹಿನ್ನೆಲೆ ನಟ ಅರ್ಮಾನ್ ಕೊಡ್ಹಿ, ಡ್ರಗ್ ಪೆಡ್ಲರ್ ಅಜಯ್ ರಾಜು ಅವರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ಇಬ್ಬರ ವಿರುದ್ಧ ಎನ್’ಡಿ’ಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

‘ಶುಕ್ರವಾರವಷ್ಟೇ ಕಿರುತೆರೆ ನಟ ಗೌರವ್ ದೀಕ್ಷಿತ್ ಅವರನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ ಬಂಧಿಸಿತ್ತು. ಇದರ ಮುಂದುವರಿದ ಭಾಗವಾಗಿ ನಿನ್ನೆ ಅರ್ಮಾನ್ ಕೊಹ್ಲಿ ಅವರ ನಿವಾಸದ ಮೇಲೆ ದಾಳಿ ನಡೆದಿತ್ತು.
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ನಂತರ ಎನ್ಸಿಬಿಯು ಸಿನಿಮಾ ಮತ್ತು ಕಿರುತೆರೆಯ ಕೆಲ ಸೆಲೆಬ್ರಿಟಿಗಳು ಮಾದಕ ವಸ್ತು ಬಳಸುತ್ತಿರುವ ಬಗ್ಗೆ ತನಿಖೆ ಕೈಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos