ಪ್ಲಾಸ್ಟಿಕ್ ಕ್ರಷ್ ಯಂತ್ರಕ್ಕೆ ಚಾಲನೆ

ಪ್ಲಾಸ್ಟಿಕ್ ಕ್ರಷ್ ಯಂತ್ರಕ್ಕೆ ಚಾಲನೆ

ಬೆಂಗಳೂರು, ಡಿ. 6: ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ  ಶಿವಯೋಗಿ ಸಿ.ಕಳಸದರವರು  ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಷ್ ಮಾಡಿ ಮುರುಬಳಕೆ ಮಾಡುವ ಯಂತ್ರವನ್ನು ಶುಕ್ರವಾರ  ಉದ್ಘಾಟಿಸಿದರು.

ಯಂತ್ರವು ಪ್ರತಿ ದಿನ ಕನಿಷ್ಠ 4500 ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಷ್ ಮಾಡಲಿದ್ದು, ಒಂದು ವರ್ಷಕ್ಕೆ 17.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಈ ಯಂತ್ರದಿಂದ  ಮರುಬಳಕೆ ಆಗಲಿದೆ. ಇದರಿಂದ ರಸ್ತೆ , ಶೌಚಾಲಯದ ಕ್ಯಾಬಿನ್ ಕಸದ ಬುಟ್ಟಿಗಳು, ದಿನಚರಿ ಪುಸ್ತಕ, ಟಿ ಶರ್ಟ್ಗಳನ್ನು ತಯಾರಿಸಲಾಗಿತ್ತದೆ.

ಸದರಿ ಯಂತ್ರವು 4.2 ಲಕ್ಷ ವಾಗಿದ್ದು, ಗ್ರೀನ್ ಸೈಕ್ಲೋ ಪಾಸ್ಟ್ ಮತ್ತು ಸ್ಪರ್ಶ ಮಸಾಲಾ ರವರ ಸಾಮಾಜಿಕ ಹೊಣೆಗಾರಿಕೆಯಡಿ ಕಾರ್ಯಗತಗೊಳಿಸಲಾಗಿದೆ. ನಿಗಮವು ಉಚಿತ ಸ್ಥಳಾವಕಾಶ ಮತ್ತು ವಿದ್ಯುತ್ ವೆಚ್ಚವನ್ನು ಭರಿಸಲಿದೆ.  ನಿಗಮವು ಪರಿಸರ ಸ್ನೇಹಿ ಕಾರ್ಯಕ್ರಮಗಳಡಿ ಯೋಜನೆಯನ್ನು ಪ್ರಾಯೋಗಿಕವಾಗಿಜಾರಿಗೆ ತಂದಿದೆ.

ಸಿಬ್ಬಂದಿ & ಪರಿಸರ ನಿರ್ದೇಶಕರಾದ ಕವಿತಾ ಎಸ್. ಮನ್ನಿಕೇರಿ, ಶ್ರೀ.ರಘುರಾಮ್ , ಜಾನ್ ಡಿಸೋಜಾ, ರಂಗಪ್ರಸಾದ್ , ನಿರ್ದೇಶಕರುಗಳು, ಗ್ರೀನ್ ಸೈಕ್ಲೋಪಾಸ್ಟ್, ಶಿವಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು, ಸ್ಪರ್ಶ್ ಮಸಾಲಾ ,ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos