ಕನಸು ಕೊನೆಗೂ ನನಸು

  • In Sports
  • August 5, 2021
  • 204 Views
ಕನಸು ಕೊನೆಗೂ ನನಸು

ಟೋಕಿಯೋ: ಭಾರತದ ಪುರುಷರ ಹಾಕಿ ತಂಡ 41 ವರ್ಷದ ಬಳಿಕ ಒಲಿಂಪಿಕ್ಸ್ ನ ಪದಕ ಗೆದ್ದುಕೊಂಡಿದ್ದು, ಜರ್ಮನಿ ತಂಡವನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದು, ಭಾರತದ ಧ್ವಜವನ್ನು ಹಾರಿಸಿ ಆಟಗಾರರು ಸಂಭ್ರಮಾಚರಣೆ ಮಾಡಿದರು.
ಕಂಚಿನ ಪದಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್‌ಪ್ರೀತ್ ಪಡೆ 5-4 ಗೋಲುಗಳ ಅಂತರದಲ್ಲಿ ಗೆಲುವುಕಂಡಿದೆ. ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ.
ಮೊದಲನೆ ಹಂತದಲ್ಲಿ ಭಾರತ 1-3 ಅಂತರದಲ್ಲಿ ಹಿನ್ನಡೆ ಕಂಡಿದ್ದರೆ, ಅಂತಿಮವಾಗಿ 5-4ರ ಅಂತರದಲ್ಲಿ ಜಯಗಳಿಸಿತ್ತು.
ಭಾರತದ ಅಧ್ಯಕ್ಷರು ಮತ್ತು ಪ್ರಧಾನಿ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳು ಮತ್ತು ಆನಂದ್ ಮಹೀಂದ್ರಾ ಮತ್ತು ಕಿರಣ್ ಮಜುಂದಾರ್ ಶಾ, ವಿಜಯದ ಬಗ್ಗೆ ತಮ್ಮ ಸಂತೋಷವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos