ಕ್ರಿಕೆಟ್‍ನಲ್ಲಿ ದ್ವಿಶತಕ ಬಾರಿಸಿದ ಮರಿ ದ್ರಾವಿಡ್

ಕ್ರಿಕೆಟ್‍ನಲ್ಲಿ ದ್ವಿಶತಕ ಬಾರಿಸಿದ ಮರಿ ದ್ರಾವಿಡ್

ಬೆಂಗಳೂರು, ಡಿ. 20:  ಕ್ರಿಕೆಟ್ ಗೊಡೆ ಎಂದೆ ಹೆಸರು ವಾಸಿಯಾದ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಅಪ್ಪನಂತೆ ಬ್ಯಾಟಿಂಗ್‍ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆಸುತ್ತಿರುವ 14 ವರ್ಷದೊಳಗಿನ ಟೂರ್ನಿಯಲ್ಲಿ ವೈಸ್ ಪ್ರೆಸಿಡೆಂಟ್ಸ್ ಇಲೆವೆನ್ ಪರ ಆಡುತ್ತಿರುವ ಸಮಿತ್ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಮಿಂಚಿದ್ದಾರೆ. ಧಾರವಾಡ ವಲಯದ ವಿರುದ್ಧ ನಡೆದ ಪಂದ್ಯದಲ್ಲಿ ಸಮಿತ್ ದ್ವಿಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಜೂನಿಯರ್ ದ್ರಾವಿಡ್ 201 ರನ್ (256 ಎಸೆತ, 22 ಬೌಂಡರಿ) ಬಾರಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಸಮೀತ್ 95 ರನ್ ಗಳಿಸಿದರು. ಜೊತೆಗೆ ಬೌಲಿಂಗ್ ಮಾಡಿ 26 ರನ್ ನೀಡಿ, 3 ವಿಕೆಟ್ ಪಡೆದಿದ್ದಾರೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos