ಹೀಗೆ ಮಾಡಿದರೆ ಹೊಳೆಯುವ ಹಲ್ಲು ನಿಮ್ಮದಾಗುತ್ತದೆ

ಹೀಗೆ ಮಾಡಿದರೆ ಹೊಳೆಯುವ ಹಲ್ಲು ನಿಮ್ಮದಾಗುತ್ತದೆ

ಬೆಂಗಳೂರು, ಜ. 21: ಹಲ್ಲುಗಳು ಕೇವಲ ಆಹಾರ ಜಗಿಯಲು ಮಾತ್ರವಲ್ಲದೇ ನಾವು ನಕ್ಕಾಗ ನಮ್ಮ ಸಹಜ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ನಕ್ಕಾಗ ಹಲ್ಲುಗಳು ಹೊಳೆಯುವ ಮುತ್ತಿನಂತೆ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ.

ಕೇವಲ ಪ್ರತಿದಿನ ಹಲ್ಲುಜ್ಜಿದ ಮಾತ್ರಕ್ಕೆ ಹಲ್ಲುಗಳು ಹೊಳಪಿನಿಂದ ಕೂಡಿರುತ್ತದೆ ಎಂದುಕೊಂಡರೆ ತಪ್ಪಾಗುತ್ತದೆ. ಮಾರುಕಟ್ಟೆಯಲ್ಲಿ ಬಹಳಷ್ಟು ಉತ್ಪನ್ನಗಳಿವೆಯಾದರೂ ಅವೆಲ್ಲವೂ ಸುರಕ್ಷಿತವೆಂಬ ಗ್ಯಾರಂಟಿ ಯಾರಿಗೂ ಇಲ್ಲಾ. ಆದ್ದರಿಂದ ಮನೆಯಲ್ಲಿಯೇ ಸಿಗುವಂತಹ ಸುಲಭವಾಗಿ ಮಾಡಿಕೊಳ್ಳಬಹುದಾದಂತಹ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಅಡುಗೆ ಸೋಡಾ: ಒಂದು ಚಿಟಿಕೆ ಅಡುಗೆ ಸೋಡಾವನ್ನು ನಿಮ್ಮ ಕೈ ಬೆರಳಿನಲ್ಲಿ ತೆಗೆದುಕೊಂಡು ನಿಮ್ಮ ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿ. ಇದು ನಿಮ್ಮ ಹಲ್ಲುಗಳ ಮೇಲಿರುವ ಕಲೆಗಳ ಮೇಲೆ ಸ್ಕ್ರಬ್ ನ ರೀತಿ ಕೆಲಸ ಮಾಡುತ್ತದೆ, ಹಾಗೆಯೇ ಬಾಯಿಯಲ್ಲಿನ ಬ್ಯಾಕ್ಟೀರಿಯಾವನ್ನು ನಿಯಂತ್ರಿಸುತ್ತದೆ.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಬಹಳ ನೈಸರ್ಗಿಕವಾಗಿ ಲಭ್ಯವಾಗುವ ತೈಲವಾಗಿದೆ. ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು 15 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ. ಹೀಗೆ ಮಾಡುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸಿ, ವಸಡುಗಳ ಉರಿಯೂತವು ಕಡಿಮೆಯಾಗುತ್ತದೆ.

ಉಪ್ಪು,ನಿಂಬೆರಸ: ಉಪ್ಪು ಮತ್ತು ನಿಂಬೆರಸದ ಮಿಶ್ರಣದಿಂದ ಹಲ್ಲುಗಳನ್ನು ತಿಕ್ಕಿರಿ. ವಾರಕ್ಕೊಮ್ಮೆ ಅಥವಾ 2 ಬಾರಿ ಈ ರೀತಿ ಮಾಡುವುದರಿಂದ ಹಲ್ಲುಗಳು ಸಹಜವಾಗಿಯೇ ಬೆಳ್ಳಗಾಗುತ್ತವೆ.

ಕ್ಯಾರೆಟ್: ಪ್ರತಿದಿನವೂ ಹಸಿ ಕ್ಯಾರೆಟನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ಅದು ಹಲ್ಲುಗಳನ್ನು ಸ್ವಚ್ಛಗೊಳಿಸುವುದಲ್ಲದೇ, ಹಲ್ಲಿನಲ್ಲಿರುವ ಪ್ಲಾಕ್ ಅನ್ನು ತೆಗೆದುಹಾಕುತ್ತದೆ.

ಸೇಬು, ಸೌತೆಕಾಯಿ: ಸೇಬು ಮತ್ತು ಸೌತೆಕಾಯಿಯನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ, ಹಲ್ಲುಗಳಿಗೆ ವ್ಯಾಯಾಮ ದೊರಕಿದಂತೆ ಆಗುವುದಲ್ಲದೇ ಹಲ್ಲಿನಲ್ಲಿರುವ ಕಲೆಗಳನ್ನು ತೆಗೆದುಹಾಕುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos