ಶಿವಶರಣಪ್ಪ ರವರಿಗೆ ಡಾಕ್ಟರೇಟ್

ಶಿವಶರಣಪ್ಪ ರವರಿಗೆ ಡಾಕ್ಟರೇಟ್

ಚಿಂಚೋಳಿ: ಸುಮಾರು ೫೦ ವರ್ಷಗಳ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂದು ಕನ್ನಡ ನಾಡಿನಾದ್ಯಂತ ವಚನಗಳನ್ನು ಪ್ರವಚನಗಳ ಮೂಲಕ ಬಿತ್ತರಿಸಿದ ಪ್ರವಚನ ಪಿತಾಮಹನೆಂದೆ ಕರೆಸಿಕೊಳ್ಳುವ ಪೂಜ್ಯ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ವಚನಧರ್ಮ ಚಳುವಳಿಯ ವಿಷಯಕ್ಕೆ ಪಿಎಚ್.ಡಿ ದೊರೆತಿರುವುದು ಸಮುದ್ರದಲ್ಲಿನ ಮುತ್ತು-ರತ್ನ ಹುಡುಕಿದಂತಾಗಿದೆ.

ಕಲ್ಬುರ್ಗಿಯ ನಿವೃತ್ತ ಸಹ ಪ್ರಧ್ಯಾಪಕ ಡಾ.ಎಸ್.ಆರ್.ತಡಕಲ್ ರವರ ಮಾರ್ಗದರ್ಶನದಲ್ಲಿ ಕಾಳಗಿಯ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶರಣ ಶಿವಶರಣಪ್ಪ ಚನ್ನಬಸಪ್ಪ ಮೋತಕಪಳ್ಳಿ ಅವರು ಕೈಗೊಂಡ “ಲಿಂಗಾನಂದರ ವಚನಧರ್ಮ ಚಳುವಳಿ” ವಿಷಯದ ಸಂಶೋಧನಾ ಮಹಾಪ್ರಬಂಧಕ್ಕೆ ಗುಲ್ಬುರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಶಿವರಣಪ್ಪ ಮೋತಕಪಳ್ಳಿಯವರಿಗೆ ಪಿಎಚ್.ಡಿ ಪದವಿ ಲಭಿಸಲು ಪ್ರತಿಯೊಂದು ಹಂತದಲ್ಲಿ ಬೈಲೂರು-ಮುಂಡರಗಿ ತೋಂಟದಾರ್ಯ ಮಠದ ಪೂಜ್ಯಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಮಿಗಳು ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ತಮ್ಮ ಒಡನಾಟದ ಅನುಭವದ ಕುರಿತು ಮಾರ್ಗದರ್ಶನ ತೋರಿದರಿಂದ ಇಂದು ಜಗತ್ತಿನ ಇತಿಹಾಸದಲ್ಲಿ ಲಿಂ. ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳ ಜೀವನದ ಕುರಿತು ಪ್ರಚಾರಗೊಳ್ಳಲು ಸಹಕಾರಿಯಾಯಿತು.

ನಿಜಗುಣಾನಂದ ಮಹಾಸ್ವಾಮಿಗಳಿಂದ ಹರ್ಷ ಶರಣ ಶಿವಶರಣಪ್ಪ ಮೋತಕಪಳ್ಳಿಯವರಿಗೆ ಪಿಎಚ್.ಡಿ ಪದವಿ ದೊರೆತಿದ್ದರಿಂದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳಿಗೆ ಎಲ್ಲಿಲ್ಲದ ಸಂತಸವಾಗಿದೆ. ಶಿವಶರಣಪ ಅವರಿಗೆ ಪೂಜ್ಯರ ಕುರಿತು ಇನಷ್ಟು ಸಂಶೋಧನೆಗಳು ಹೊರಬರಲಿ ಎಂದು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಚಿಂಚೋಳಿ ತಾಲೂಕಿನ ಕುಗ್ರಾಮ ಶೀಕಾರ ಮೋತಕಪಲ್ಲಿಯ ಇಂತಹ ಸಾಧನೆಗೆ ಇಡೀ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ, ಗ್ರಾಮದ ವತಿಯಿಂದ ಅವರಿಗೆ ಸನ್ಮಾನಿಸಲಾಗುವುದು ಎಂದು ಗ್ರಾಮಸ್ಥ ತಾಲ್ಲೂಕು ಕಾಂಗ್ರೆಸ್ ವಕ್ತಾರ ಶರಣು ಪಾಟೀಲ ಮೋತಕಪಲ್ಲಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos