ಮಠದ ಮಕ್ಕಳಿಗೆ ಸ್ಪಿರುಲಿನ ವಿತರಣೆ

  • In State
  • August 5, 2020
  • 159 Views
ಮಠದ ಮಕ್ಕಳಿಗೆ ಸ್ಪಿರುಲಿನ ವಿತರಣೆ

ತುಮಕೂರು :ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮಠದ ಮಕ್ಕಳಿಗೆ ಇಂದು ಸ್ಪಿರುಲಿನ ಚಿಕ್ಕಿ ವಿತರಣೆ ಮಾಡಿದರು.

ಸಿದ್ಧಗಂಗಾ ಮಠದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಪಿರುಲಿನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಮಠದ ವಿದ್ಯಾರ್ಥಿಗಳಿಗೆ ಸ್ಪಿರುಲಿನ ಚಿಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಚಿಕ್ಕಿ ವಿತರಣೆ ಮಾಡಿದ ನಂತರ ಮಾತನಾಡಿದ ಅವರು ಕೋವಿಡ್-೧೯ ಸಂದರ್ಭದಲ್ಲಿ ಈ ಸ್ಪಿರುಲಿನ ಚಿಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಹಲವಾರು ಸಮಸ್ಯೆಗಳಲ್ಲಿ ಅಪೌಷ್ಠಿಕತೆಯು ಸಹ ಒಂದು. ಅದರಲ್ಲಿಯೂ ಮಕ್ಕಳು, ಗರ್ಭಿಣಿ, ಬಾಣಂತಿ, ವಯೋವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸ್ಪಿರುಲಿನ ಚಿಕ್ಕಿಯು ಪೌಷ್ಠಿಕ ಆಹಾರವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪಿರುಲಿನ ಇದೊಂದು ಪಾಚಿ ಜಾತಿಗೆ ಸೇರಿದ ಸಸ್ಯವಾಗಿದ್ದು, ಜನರಿಗೆ ಇನ್ನೂ ಚಿರಪರಿಚಿತವಾಗಿಲ್ಲ. ಶ್ರೀ ಸಿದ್ದಗಂಗಾ ಮಠಕ್ಕೆ ಪ್ರತಿದಿನ ಗಣ್ಯಾತಿಗಣ್ಯರು, ವಿದೇಶೀಯರು, ಸಾರ್ವಜನಿಕರು ಭೇಟಿ ನೀಡುವುದರಿಂದ ಸ್ಪಿರುಲಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಠದ ಆವರಣದಲ್ಲಿಯೇ ಸ್ಪಿರುಲಿನ ಬೆಳೆಯ ಪ್ರಾತ್ಯಕ್ಷಿಕಾ ಘಟಕ ಸ್ಥಾಪಿಸಲು ಹಾಗೂ ಮಠದ ಮಕ್ಕಳಿಗೆ ಪ್ರತಿದಿನ ಸ್ಪಿರುಲಿನ ಚಿಕ್ಕಿ/ಮಾತ್ರೆಗಳ ಪೂರೈಕೆಗಾಗಿ ಸ್ಪಿರುಲಿನ ಬೆಳೆಯಲು ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಮಾತನಾಡಿ ನೈಸರ್ಗಿಕವಾದ ಪೌಷ್ಠಿಕ ಆಹಾರವಾಗಿರುವ ಸ್ಪಿರುಲಿನ ೧೦೦ಕ್ಕೂ ಹೆಚ್ಚು ಪೋಷಕಾಂಶಗಳನ್ನೊಳಗೊಂಡಿದೆಯಲ್ಲದೆ ಹೇರಳ ಪ್ರಮಾಣದಲ್ಲಿ ಸೂಕ್ಷ್ಮ  ಪೋಷಕಾಂಶಗಳನ್ನು ಹೊಂದಿದೆಯೆಂದು ಮೈಸೂರಿನ ಸಿಎಫ್‌ಟಿಆರ್‌ಐ(ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರದ ಸಂಶೋಧನೆಯಲ್ಲಿ ದೃಢಪಟ್ಟಿರುವುದರಿಂದ ಈ ಸ್ಪಿರುಲಿನ ಚಿಕ್ಕಿಯನ್ನು ವಿತರಿಸಲಾಗುತ್ತಿದೆ. ಮಠದ ೧ಸಾವಿರ ಮಕ್ಕಳಿಗೆ ೧ ವರ್ಷಗಳ ಕಾಲ ಈ ಚಿಕ್ಕಿಯನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ. ಪ್ರಸ್ತುತ ಮಠದಲ್ಲಿರುವ ಸುಮಾರು ೧೫೦ ಮಕ್ಕಳು ಈ ಚಿಕ್ಕಿಯ ಸೇವನೆ ಮಾಡಲಿದ್ದಾರೆ ಎಂದರು.
ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಇದೇ ಮಾಹೆಯ ೨ನೇ ವಾರದಿಂದ ಒರಿಸ್ಸಾ ರಾಜ್ಯದ ಸುಂದರಘಡ ಜಿಲ್ಲೆಯ ಸುಮಾರು ೩೦ಸಾವಿರ ಮಕ್ಕಳಿಗೆ ಈ ಸ್ಪಿರಲಿನ ಪೂರಕ ಆಹಾರವನ್ನು ಒದಗಿಸಲು ಸ್ಪಿರುಲಿನ ಫೌಂಡೇಷನ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.
ಹಿರಿಯ ಐಎಎಸ್ ಅಧಿಕಾರಿ ಹಾಗೂ ಸ್ಪಿರುಲಿನ ಫೌಂಡೇಶನ್‌ನ ಮುಖ್ಯಸ್ಥರಾದ ಸಿ.ಎಸ್. ಕೇದಾರ್ ಅವರು ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕಷ್ಟೇ ಅಲ್ಲದೆ ರಾಷ್ಟç ಮಟ್ಟದಲ್ಲಿಯೂ ಸ್ಪಿರುಲಿನ ಚಿಕ್ಕಿ ವಿತರಣೆ ಮಾಡುವ ಉದ್ದೇಶವನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಸಿ.ಎಸ್. ಕೇದಾರ ಅವರು ಮಾತನಾಡಿ, ೧೯೯೬ರಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಾಗೂ ಮಠದ ಸೇವೆಗಳ ಬಗ್ಗೆ ಸ್ಮರಿಸುತ್ತಾ ಸ್ಪಿರುಲಿನ ಪೌಷ್ಠಿಕ ಆಹಾರವನ್ನು ಪ್ರತಿದಿನ ನಾವು ಸೇವಿಸಬೇಕು. ಬರುವ ದಿನಗಳಲ್ಲಿ ಇದನ್ನು ರಾಷ್ಟç ಮಟ್ಟದ ಕಾರ್ಯಕ್ರಮವನ್ನಾಗಿ ರೂಪಿಸುವ ಉದ್ದೇಶವಿದ್ದು, ಮಠದ ಆಶೀರ್ವಾದ ನಮ್ಮೊಂದಿಗಿರಬೇಕೆಂದು ಸಿದ್ದಗಂಗಾ ಮಠದ ಸ್ವಾಮೀಜಿಯವರಲ್ಲಿ ಅರಿಕೆ ಮಾಡಿಕೊಂಡರು. ಸ್ವ-ಸಹಾಯ ಗುಂಪಿನ ಮಹಿಳೆಯರ ಮೂಲಕ ಸ್ಪಿರುಲಿನ ಚಿಕ್ಕಿ ಉತ್ಪಾದಿಸುವ ಉದ್ದೇಶವಿದ್ದು, ಇದರಿಂದ ಸ್ಥಳೀಯ ಮಹಿಳೆಯರ ಆರ್ಥಿಕ ಬಲ ಹೆಚ್ಚಾಗುವುದಲ್ಲದೆ ಮಕ್ಕಳ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದಿದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಸಿದ್ದಗಂಗಾ ಆಸ್ಪತ್ರೆ ಮುಖ್ಯಸ್ಥ ಡಾ: ಪರಮೇಶ್ವರ್, ಮಠದ ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos