‘ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ’

‘ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ’

ಶಹಾಪುರ: ತಾಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ವಲ್ಡ್ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ ಗುರುವಾರ ಸರ್ಕಾರಿ ಶಾಲಾ ಮಕ್ಕಳಿಗೆ ಟಿಫೀನ್ ಬಾಕ್ಸ್, ಕುಡಿಯುವ ನೀರಿನ ಬಾಟಲಿ, ಪೆನ್ನು, ಪುಸ್ತಕಗಳು  ಇತರೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಸಿದ್ದಪ್ಪ ಚಟ್ನಳ್ಳಿ, ಗ್ರಾಮದ ಯುವ ಕಾಂಗ್ರೇಸ್ ಮುಖಂಡರಾದ ಮಲ್ಲಣ್ಣಗೌಡ ಮಾಲೀ ಪಾಟೀಲ್, ಗ್ರಾ.ಪಂ ಸದಸ್ಯರಾದ ನಿಂಗಣ್ಣ ನಾಟೇಕರ್, ಮಶ್ಯಾಖಸಾಬ್ ಚೌದ್ರಿ, ಬಾಬುರಾವ ಗೇನುಸಿಂಗ್, ವಲ್ಡ್ ವಿಷನ್ ಇಂಡಿಯಾ ಸಂಸ್ಥೆ ಮುಖ್ಯಸ್ಥರಾದ ಜಯಕುಮಾರ ಸೇರಿದಂತೆ ಶಾಲೆಯ ಮಕ್ಕಳು ಪೊಷಕರು, ಗ್ರಾಮದ ಮುಖಂಡರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos