ಪುದೀನಾ ರೈಸ್ ಬಾತ್ ಟ್ರೈ ಮಾಡಿದ್ದೀರಾ.?

ಪುದೀನಾ ರೈಸ್ ಬಾತ್ ಟ್ರೈ ಮಾಡಿದ್ದೀರಾ.?

ಬೆಂಗಳೂರು, ಜ. 21: ಸಾಮಾನ್ಯವಾಗಿ ಮಹಿಳೆಯರಿಗೆ ಬೆಳಿಗ್ಗೆ ಎದ್ದ ಕೂಡಲೆ ಅಡುಗೆ ಮನೆಗೆ ಹೋಗಿ ಇಂದು ಏನು ಅಡುಗೆ ತಯಾರಿಸಬೇಕೆಂದು ಚಿಂತಿಸುತ್ತಾರೆ. ಚಿಂತೆ ಮಾಡುವವರು ಈ ಪುದಿನಾ ರೈಸ್ ಬಾತ್ ಮಾಡಿ ನಿಮ್ಮ ಚಿಂತೆ ದೂರ ಮಾಡಿಕೊಳ್ಳಿ.

ಮಕ್ಕಳ ಲಂಚ್ ಬಾಕ್ಸ್, ಅಥವಾ ಯಾರಾದರೂ ಮನೆಗೆ ಸಡನ್ನಾಗಿ ಬಂದರೆ ಏನು ಅಡುಗೆ ಮಾಡುವುದು ಎಂದು ಚಿಂತೆ ಮಾಡುವವರು ಒಮ್ಮೆ ಈ ಪುದೀನಾ ರೈಸ್ ಬಾತ್ ಮಾಡಿ ನೋಡಿ.

ಪುದೀನಾ ಆರೋಗ್ಯಕ್ಕೂ ಒಳ್ಳೆಯದು ಹಾಗೇ ಬೇಗನೆ ಅಡುಗೆ ಕೆಲಸವು ಮುಗಿದು ಬಿಡುತ್ತದೆ. ರಾತ್ರಿ ಮಿಕ್ಕಿದ ಅನ್ನದಲ್ಲಿಯೂ ಇದನ್ನು ಮಾಡಿಕೊಳ್ಳಬಹುದು.

ಬೇಕಾಗುವ ಸಾಮಾಗ್ರಿ: 2 ಕಪ್-ಅನ್ನ, ½ ಕಪ್ ಪುದೀನಾ ಎಲೆ, 2-ಟೇಬಲ್ ಸ್ಪೂನ್ ಕಡಲೇಬೀಜ, ಅರ್ಧ ತುಂಡು ಶುಂಠಿ, ಸಾಸಿವೆ-1 ಟೀ ಸ್ಪೂನ್, ಹಸಿಮೆಣಸು-2, ಈರುಳ್ಳಿ-1 ದೊಡ್ಡದ್ದು, ಎಣ್ಣೆ ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಪುದೀನಾ, ಹಸಿಮೆಣಸು, ಶುಂಠಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕಡಲೇಬಿಜ ಹಾಕಿ ಹುರಿದಿಟ್ಟುಕೊಳ್ಳಿ.

ನಂತರ ಸಾಸಿವೆ ಹಾಕಿ. ಅದು ಸಿಡಿದಾಗ ಈರುಳ್ಳಿ ಹಾಕಿ ಪ್ರೈ ಮಾಡಿ. ಆಮೇಲೆ ಹುರಿದಿಟ್ಟುಕೊಂಡ ಕಡಲೇಬೀಜ ಹಾಕಿ ಆಮೇಲೆ ರುಬ್ಬಿಕೊಂಡ ಮಸಾಲೆ ಸೇರಿಸಿ 5 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಮಸಾಲೆಯ ಹಸಿ ವಾಸನೆ ಹೋದ ಮೇಲೆ ಅನ್ನ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಆಮೇಲೆ ಅರ್ಧ ಲಿಂಬೆ ಹಣ್ಣಿನ ರಸ ಹಿಂಡಿದರೆ ಪುದೀನಾ ರೈಸ್ ಬಾತ್ ಸವಿಯಲು ಸಿದ್ಧ.

 

ಫ್ರೆಶ್ ನ್ಯೂಸ್

Latest Posts

Featured Videos