ಮಕ್ಕಳ ನೆಚ್ಚಿನ ಪ್ರವಾಸಿ ತಾಣ ಧಾರವಾಡ ಪ್ರಾದೇಶಿಕ ವಿಜ್ಞಾನ ಸಂಸ್ಥೆ

ಮಕ್ಕಳ ನೆಚ್ಚಿನ ಪ್ರವಾಸಿ ತಾಣ ಧಾರವಾಡ ಪ್ರಾದೇಶಿಕ ವಿಜ್ಞಾನ ಸಂಸ್ಥೆ

ಧಾರವಾಡ, ಜ. 22: ಕೈ ಬಿಸಿ ಕರೆಯುತ್ತಿದೆ! ಮಕ್ಕಳ ಪ್ರವಾಸಿ ತಾಣವಾದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ. ಹೌದು, ಭಾನುವಾರ ಬಂತು ಅಂದರೆ ನಮಗೆ ನೆನಪಾಗುವದು ಎಲ್ಲಿಯಾದರೂ ವಾರದ ಕೊನೆಯದಿನ ಸ್ವಲ್ಪ ಕಾಲ ಕಳೆಯಬೇಕು ಅಂತ   ಅನ್ನಿಸುತ್ತದೆ. ಮಕ್ಕಳ ಅಧ್ಯಯನ, ಅವರಿಗೋಸ್ಕರ ಕಾಲ ಕಳೆಯುವುದು ಇನ್ನೂ ಖುಷಿಯನ್ನು ನೀಡುತ್ತದೆ. ಇಂತಹ ಮನರಂಜನೆಯೊಂದಿಗೆ ವಿಜ್ಞಾನದ ತಿಳುವಳಿಕೆ ಮೂಡಿಸುವ ಪ್ರವಾಸಿ ತಾಣವಾದ, ಅಂಥಹ ಒಂದು ವಿಜ್ಞಾನ ಕೇಂದ್ರ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣಕ್ಕೆ ಹೊಂದಿಕೊಂಡಂತೆ ಮಕ್ಕಳನ್ನು ಕೈ ಬಿಸಿ ಕರೆಯುತ್ತಿದೆ.ಹೌದು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು.4000 ಚದರ ಮೀಟರ್ ವಿಸ್ತೀರ್ಣದಲ್ಲಿ ಸ್ಥಾಪಿಸಲಾಗಿದ್ದು, ಮಕ್ಕಳು ರಜಾದಿನದ ಮೂಡ್ನಲ್ಲಿ ಇಲ್ಲಿಗೆ ಬರುವುದರಿಂದ ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಸಂಖ್ಯಾಶಾಸ್ತ್ರದೊಂದಿಗೆ ಭೌಗೋಳಶಾಸ್ತ್ರದ ಜ್ಞಾನವನ್ನು ಮಕ್ಕಳು ಸುಲಭವಾಗಿ  ಅರ್ಥೈಸಿಕೋಳಬಹುದಾಗಿದೆ. ರಜೆಯ ಮಜಾದಲ್ಲಿ ನೀವು ಒಮ್ಮೆ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ  ಮಕ್ಕಳಿಗೆ ಒಮ್ಮೆ ಕರೆದುಕೊಂಡು ಬಂದರೆ ಗ್ರಂಥಾಲಯ, ತಾರಾಮಂಡಲ, ಚಿತ್ರಮಂದಿರ, ಸಮಾಲೋಚನಾ ಮಂದಿರ, ವಿಜ್ಞಾನ ಪ್ರಾತ್ಯಕ್ಷಿಕೆ ಉಪನ್ಯಾಸ ಮಂದಿರ, ಮಕ್ಕಳ ಚಟುವಟಿಕೆ ಕೇಂದ್ರ, ವಾನಿಯಂತ್ರಿತ, ಸಭಾಂಗಣ, ಸ್ವಾಗತಾಲಯ, ತಾತ್ಕಾಲಿಕ ಪ್ರದರ್ಶನಾಲಯ ಸ್ಥಳ ಇನ್ನೂ ಅನೇಕ  ಸೌಲಭ್ಯಗಳನ್ನು ಒಳಗೊಂಡ ಒಂದೇ ಸಮುಚ್ಚಯದ ವಿಸ್ತಾರವಾದ ಕಟ್ಟಡ ಆಕರ್ಷಿಸುತ್ತದೆ.ಇ ದರಲ್ಲಿ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಪರಂಪರೆ, ಜೀವಯಾಂತ್ರಿಕ ಮತ್ತು ಮೋಜಿನ ವಿಜ್ಞಾನ ಎಂಬ ಮೂರು ಪ್ರದರ್ಶನಾಲಯಗಳು, ಹವಾ ನಿಯಂತ್ರಿತ ತ್ರೀಡಿ ಆಯಾಮವಿದೆ.ಇನ್ನೂ ಈ ಕೇಂದ್ರವನ್ನು ರಾಷ್ಟ್ರೀಯ ವಿಜ್ಞಾನ ಮತ್ತುವಸ್ತು ಸಂಗ್ರಹಾಲಯ ಸಂಸ್ಥೆ ಮತ್ತು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಹಯೋಗದಲ್ಲಿ 27ನೇ ಫೇ 2012 ರಂದು ಸ್ಥಾಪಿಸಲಾಯಿತು. ಈ ಮೂಲಕ ಜನಸಾಮಾನ್ಯರು, ಮಕ್ಕಳು, ಶಿಕ್ಷಕರು ಮತ್ತು ವಿಧ್ಯಾರ್ಥಿಗಳಿಗೆ ಮೂಲ ವಿಜ್ಞಾನ ಮತ್ತು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಲು ಸಹಾಯಕಾರಯಾಗಿದೆ. ಸಂಸ್ಥೆಯು ಮಕ್ಕಳಿಗಾಗಿ ಹಲವಾರು ಕಾರ್ಯಯೋಜನೆಗಳನ್ನು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸುವದರೊಂದಿಗೆ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆಪ್ರೋತ್ಸಾಹ ನೀಡುವುದರೊಂದಿಗೆ ಅವರಿಗೆ ಸಾಧನೆಗೆ ಪ್ರೋತ್ಸಾಹಿಸುತ್ತಿರುತ್ತದೆ.

ಮಕ್ಕಳಿಗೆ ಸಾಮಾನ್ಯ ಜ್ಞಾನದೊಂದಿಗೆ  ಹಲವಾರು ಆಟದ ವಸ್ತುಗಳೊಂದಿಗೆ ಅವರಿಗೆ ವಿಜ್ಞಾನದ ಅರಿವು ಮೂಡಿಸುವ ಹಾಗೂ   ಅವರಿಗೆ ಅರ್ಥವಾಗುವ ರೀತಿಯಲ್ಲಿ ಹಲಾವಾರು ಪ್ರಾತ್ಯಕ್ಷಿಕೆಗಳನ್ನು ಸ್ಥಾಪಿಸಿ ಅವುಗಳ ವಿವರಣೆಯನ್ನ ನೀಡಿರುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಕಂಪ್ಯೂಟರ್ ಸಿಸ್ಟಮ್ ನೇರವಿನ ಹಲವಾರು ತಂತ್ರಜ್ಞಾನ ಅಳವಡಿಸಿದ ಗ್ರಾಫೀಕ್ಸ್ತಾರಾಮಂಡಲ, ಹಾಗೂ  3ಡಿ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನುಆಯೋಜಿಸುವ ಮೂಲಕ ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನದಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತಿದೆ.ಉತ್ತರ ಕರ್ನಾಟಕದ ಹಳ್ಳಿಗಳ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಪ್ರವಾಸ ಕೈಗೊಂಡಾಗ ಅವರಿಗೆ ವಿವಿಧ ಸೌಲಭ್ಯ ವದಗಿಸುವುದರೊಂದಿಗೆ ಅವರಿಗೆ ವಿಜ್ಞಾನದ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತದೆ. ಇನ್ನೂ ಪ್ರಾದೇಶಿಕ ವಿಜ್ಞಾನ ಸಂಸ್ಥೆಯು ಪ್ರತಿಯೋಬ್ಬರು ನೋಡಲೇ ಬೇಕಾದ ಒಂದು ಪ್ರವಾಸಿ ತಾಣವಾಗಿ ಹೊರ ಹೋಮ್ಮುತ್ತಿದೆ.

ಮಕ್ಕಳಿಗೆ ವಿಜ್ಞಾನದೊಂದಿಗೆ ಕಲಿಕಾ ಕೌಶಲ್ಯ ಚಟುವಟಿಕೆ ಬೇಳೆಸುವ ನಿಟ್ಟಿನಲ್ಲಿ ಪ್ರಾದೇಶಿಕ ವಿಜ್ಞಾನ ಸಂಸ್ಥೆ ಕಾರ್ಯ ಅವಿಸ್ಮರಣೀಯ. ಒಮ್ಮೆ ನೀವು ಸಹ ಭೇಟಿಯಾಗಿ ನಿಮ್ಮ ಮಕ್ಕಳಿಗೂ ಕರೆತಂದು ಸಂಭ್ರಮಿಸಿ ಅದರ ಮಜವೇ ಬೇರೆ.

ಮಂಜುನಾಥ ಶಿ. ಕವಳಿ

ಫ್ರೆಶ್ ನ್ಯೂಸ್

Latest Posts

Featured Videos