ಅಭಿವೃದ್ದಿಗಳೇ ನನ್ನ ಧ್ಯೇಯ

ಅಭಿವೃದ್ದಿಗಳೇ ನನ್ನ ಧ್ಯೇಯ

ಪಾವಗಡ: ಕೋವಿಡ್ ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಆಟೋಚಾಲಕರಿಂದ ಹಿಡಿದು ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರ ಕಲ್ಯಾಣಕ್ಕೆ ಸಹಾಯ ಧನಗಳನ್ನು ನೀಡಿದ್ದು ನಿರುಧ್ಯೋಗಿ ಪದವೀಧರರನ್ನು ಕಡೆಗಣಿಸಿರುವುದು ನ್ಯಾಯವಲ್ಲ ಎಂದು ಆಗ್ನೇಯ ಪದವೀಧರ ಕ್ಷೇತ್ರ ಚುನಾವಣ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.
ಪಾವಗಡ ಪಟ್ಟಣದ ಗುರುಭವನ ಆವರಣದಸಲ್ಲಿ ಶಿಕ್ಷಕರು ಹಾಗೂ ಪದವೀಧರರಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಪದವೀಧರ ಉಧ್ಯೋಗಿಗಳು ಹಾಗೂ ನಿರುಧ್ಯೋಗಿಗಳ ಅಭಿವೃದ್ದಿಗೆ ಸರ್ಕಾರ ಈವರೆಗೂ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ, ನೆರೆಯ ರಾಜ್ಯಗಳಲ್ಲಿನ ಜನಪರ ಯೋಜನೆಗಳನ್ನು ನೋಡಿ ನಮ್ಮ ರಾಜ್ಯ ಸರ್ಕಾರ ಕಲಿಯಬೇಕಿದೆ ಎಂದು ತಿಳಿಸಿದರು.
ಕಳೆದ ಒಂದು ದಶಕದಿಂದ ಹಲವಾರು ಹುದ್ದೆಗಳನ್ನು ಅನುಭವಿಸಿದ್ದೇನೆ, ಶೈಕ್ಷಣಿಕ ಕ್ಷೇತ್ರ ಹಾಗೂ ಸಾಮಜಿಕ ಕಾಳಜಿವುಳ್ಳ ನನಗೆ ಪದವೀಧರ ನಿರುಧ್ಯೋಗಿಗಳ ಕಲ್ಯಾಣಕ್ಕೆದುಡಿಯುವ ಹಠ ಬಂದಿರುವ ಹೆನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಪದವೀಧರರ ಕಷ್ಟಗಳಿಗೆ ಸ್ಪಂದಿಸಿ ಪ್ರತಿಜಿಲ್ಲೆಯಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿಕೇಂದ್ರವನ್ನು ಸ್ಥಾಪಿಸಿ ಸಮಾಜದ ಮುಖ್ಯವಾಹಿನಿಗೆ ತರುವಉದ್ದೇಶ ಹೊಂದಿದ್ದೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos